Kannada NewsKarnataka NewsLatest

*ಹೆತ್ತ ತಾಯಿಯನ್ನೇ ಹತ್ಯೆಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಗ*

ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಮಗ ತನ್ನ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದು ಪೆಟ್ರೋಲ್ ಸುರುದು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘೋರ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನ ಗಡಿಭಾಗ ಕಾರಸಗೋಡಿನ ಮಂಜೇಶ್ವರದಲ್ಲಿ ಈ ಘಟನೆ ನಡೆದಿದೆ. ಮರ್ಕಾದಿ ಮೂಲದ ಹಿಲ್ಡಾ ಮೆಂತೋರೋ (60) ಮಗನಿಂದಲೇ ಕೊಲೆಯಾಗಿರುವ ಮಹಿಳೆ. ಮೆಲ್ವಿನ್ (26) ಹೆತ್ತ ತಯೈಯನ್ನೇ ಹತ್ಯೆಗೈದ ಮಗ.

ನಿನ್ನೆ ಮಧ್ಯರಾತ್ರಿ ಮೆಲ್ವಿನ್, ತನ್ನ ತಾಯಿಯನ್ನು ಹತ್ಯೆಗೈದಿದ್ದು, ಬೆಳಗಾಗುವಷ್ಟರಲ್ಲಿ ಮನೆಯ ಹಿಂಬಾಗಕ್ಕೆ ಶವವನ್ನು ಎಳೆದೊಯ್ದು ಸುಟ್ಟು ಹಾಕಿದ್ದ. ಅನುಮಾನಗೊಂಡು ಮನೆಯಿಂದ ಹೊರಬಂದ ಚಿಕ್ಕಮ್ಮ ಲೋಲಿಟಾ ಅವರ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಈ ವೇಳೆ ಲೋಲಿಟಾ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕ-ಪಕ್ಕದ ನಿವಾಸಿಗಳು ಆಗಮಿಸಿದ್ದಾರೆ. ಜನರು ಸೇರುತ್ತಿದ್ದ ಆರೋಪಿ ಮೆಲ್ವಿನ್ ಸ್ಥಳದಿಂದ ಪರಾರುಯಾಗಿದ್ದಾನೆ. ಹಲ್ಲೆಗೊಳಗಾಗಿದ್ದ ಲೋಲಿಟಾರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆರೋಪಿ ಮೆಲ್ವಿನ್ ನನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಬಳಿ ಕೇರಳ ಪೊಲೀಸರು ಬಂಧಿಸಿದ್ದಾರೆ. ತಾಯಯಿನ್ನೇ ಹತ್ಯೆಗೈಯಲು ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button