Kannada NewsKarnataka News

ಭಾರತೀಯ ಸಂಸ್ಕೃತಿಯ ಉತ್ಸವ

ಪ್ರಗತಿವಾಹಿನಿ ಸುದ್ದಿ, ಮಾಂಜರಿ -ಚಿಕ್ಕೋಡಿ  ತಾಲೂಕಿನ ಇಂಗಳಿ ಗ್ರಾಮದಲ್ಲಿ ಭಾರತೀಯ ಸಂಸ್ಕೃತಿಯ ಉತ್ಸವ ಹಿನ್ನೆಲೆಯಲ್ಲಿ ಗಂಗಾಪೂಜೆ ಹಾಗೂ ಬೃಹತ್ ಪ್ರಮಾಣದಲ್ಲಿ ಜಲಕುಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಶಿಸಿ ಹೋಗುತ್ತಿರುವ ನಮ್ಮ ದೇಶದ ಸಂಸ್ಕೃತಿಯ, ಹಿನ್ನೆಲೆ, ಪರಂಪರೆ, ಆಚರಣೆಗಳು ಸೇರಿದಂತೆ ಭಾರತೀಯ ಸಂಸ್ಕೃತಿಯ ಪರಿಚಯಿಸುವ ನಿಟ್ಟಿನಲ್ಲಿ ಇಂಗಳಿ ಗ್ರಾಮದಲ್ಲಿ ಭಾರತೀಯ ಸಂಸ್ಕೃತಿಯ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕೃಷ್ಣಾನದಿಗೆ ತೆರಳಿ ಗಂಗಾಪೂಜೆಯನ್ನು ನೇರವರಿಸಿದರು.
ಸಕಲ ವಾದ್ಯ ಮೇಳದೊಂದಿಗೆ, ಸಂತರು, ಸನ್ಯಾಸಿಗಳು, ಪಲ್ಲಕ್ಕಿಗಳು ಸರ್ವ ಗ್ರಾಮಸ್ಥರು ಸೇರಿ ಗ್ರಾಮದ ತುಂಬಾ ಮಹಿಳೆಯರು ಜಲಕುಂಭದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿಶೇಷವಾಗಿ ಇಂಗಳಿ ಗ್ರಾಮದಲ್ಲಿ ಬರುವ ಎಲ್ಲ ದೇವಸ್ಥಾನದ ದೇವರಿಗೆ ಜಲಾಭಿಷೇಕ ಮಾಡಲಾಯಿತು. ಕೃಷ್ಣಾನದಿಯಿಂದ ಪ್ರಾರಂಭವಾದ ಜಲಕುಂಭೋತ್ಸವವು ಗ್ರಾಮ ಪಂಚಾಯತ, ಮಡಿವಾಡಳ ರಸ್ತೆ, ಇಂಗಳಿ ಗ್ರಾಮದ ತುಂಬ ಸಂಚರಿಸಿತು.
ಕೊನೆಗೆ ಬಸವೇಶ್ವರ ದೇವಸ್ಥಾನಕ್ಕೆ ಬಂದು ಪ್ರತಿಯೊಂದು ಜಲಕುಂಭವನ್ನು ಬಸವೇಶ್ವರ ಪ್ರತಿಮೆಗೆ ಜಲಾಭಿಷೇಕ ಮಾಡಿ,ಪೂಜ್ಯ ಮಹೇಶಾನಂದ ಶ್ರೀಗಳು ಆಶೀರ್ವಚನ ನೀಡಿದರು. ನಂತರ ಮಾಧ್ಯಮಗಳ ಜೊತೆ ಮಹೇಶಾನಂದ ಶ್ರಿಗಳು ಮಾತನಾಡಿ ಭಾರತೀಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಇಂಗಳಿ ಗ್ರಾಮದಿಂದಲೇ ಜಾಗೃತಿ ಪ್ರಾರಂಭವಾಗಿದೆ. ಇವತ್ತು 1008 ಜಲಕುಂಭಗಳ ಮೆರವಣಿಗೆ ಜಲಾಭಿಷೇಕ ಹಮ್ಮಿಕೊಳ್ಳಲಾಗಿದೆ. ಇನ್ನೂ  ಹಲವು ಕಾರ್ಯಕ್ರಮಗಳು ಜರುಗುಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜು ಚೌಗಲಾ, ರಮೇಶ ಮುರ್ಚಟೆ, ಬಾಬು ಮಿರ್ಜೆ, ಪ್ರಭಾಕರ ಕುಡಚೆ, ವ್ರದಮಾನ ಧರ್ಮನ್ನವರ, ರಾವಸಾಬ ಬುಗಡೆ, ರಾಜು ಗುರವ, ಸುಭಾಷ ಮಿರ್ಜೆ, ಪಿಂಟು ಕೋರೆ, ರಾಜು ಇಂಗಳೆ, ಪ್ರಕಾಶ ಮಿರ್ಜೆ, ಅಣ್ಣಾಸಾಹೇಬ ಧಾವಡೆ, ಅಶೋಕ ಧಾವಡೆ, ಅಜೀತ ದಿಗ್ಗೆವಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button