
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹಾಸನ, ಶಿವಮೊಗ್ಗ ಬಳಿಕ ಇದೀಗ ಧಾರವಾಡದಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ.
ನವಲಗುಂದ ಪಟ್ಟಣದ ನಿವಾಸಿ ಮುತ್ತಪ್ಪ ಶಂಕ್ರಪ್ಪ ಪೂಜಾರ (44) ಹಾಗೂ ನವಲಗುಂದದ ಯಮನೂರ ಗ್ರಾಮದ ಕೇಬಲ್ ಆಪರೇಟರ್ ಫಕೀರಪ್ಪ (45) ಮೃತ ದುರ್ದೈವಿಗಳು.
ಮಲಗಿದ್ದಲ್ಲಿಯೇ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈಗಾಗಲೇ ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಈನಡುವೆ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಕೋವಿಡ್ ಲಸಿಕೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಕೋವಿಡ್ ಲಸಿಕೆಗೂ ಹೃದಯಾಘಾತದ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಏಮ್ಸ್ ವರದಿಯಲ್ಲಿ ಸ್ಪಷ್ಟಪಡಿಸಿದೆ.