*RTO ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಫೆರಾರಿ ಕಾರು ಸೀಜ್: ಸಂಜೆಯೊಳಗೆ ಬರೋಬ್ಬರಿ 1.58 ಕೋಟಿ ಹಣ ಪಾವತಿಸಲು ಡೆಡ್ ಲೈನ್*

ಪ್ರಗತಿವಾಹಿನಿ ಸುದ್ದಿ: ಕೋಟಿ ಕೋಟಿ ತೆರಿಗೆ ವಂಚನೆ ಮಾಡಿ, ಆರ್ ಟಿಓ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಐಷಾರಾಮಿ ಫೆರಾರಿ ಕಾರನ್ನು ಕೊನೆಗೂ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ್ದ ಬೆಂಗಳೂರಿನ ನಿವಾಸಿಯಾದ ಕಾರಿನ ಮಾಲಕ ಎರಡು ಮೂರು ವರ್ಷಗಳಿಂದ ಆರ್ ಟಿ ಓ ಅಧಿಕಾರಿಗಳ ಕಣ್ತಪ್ಪಿಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿ ಆರಾಮವಾಗಿ ಫೆರಾರಿಕಾರಿನಲ್ಲಿ ಓಡಾಡುತ್ತಿದ್ದ. ಇದೀಗ ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರು ತೆರಳುತ್ತಿದ್ದಾಗ ಸಂಚಾರಿ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದಾಗ ಬರೋಬ್ಬರಿ 1.58 ಕೋಟಿ ತೆರಿಗೆ ಪಾವತಿ ಬಾಕಿ ಇರುವುದು ಗೊತ್ತಾಗಿದೆ.
ಮಹಾರಾಷ್ಟ್ರದ ನೋಮ್ದಣಿ ಹೊಂದಿರುವ ಈ ಫೆರಾರಿ ಕಾರು ಏಳೂವರೆಕೋಟಿ ಮೌಲ್ಯದ್ದಾಗಿದ್ದು, ಮಹಾರಾಷ್ಟ್ರದಲ್ಲಿ 20 ಲಕ್ಷ ತೆರಿಗೆ ಪಾವತಿಸಿ ಬಳಿಕ 2023ರಿಂದ ಬೆಂಗಳೂರಿನಲ್ಲಿ ಅನಧಿಕೃತವಾಗಿ ಓಡಾಡುತ್ತಿದೆ. ಬರೋಬ್ಬರಿ 1.58 ಕೋಟಿ ತೆರಿಗೆ ಪಾವತಿ ಮಾಡದೇ ಆರ್ ಟಿಓ ಅಧಿಕಾರಿಗಳ ಕಣ್ತಪ್ಪಿಸಿ ಕಾರಿನ ಮಾಲಕ ಕಾರಿನಲ್ಲಿ ಓಡಾಡುತ್ತಿದ್ದಾರೆ.
ಕಾರನ್ನು ಸೀಜ್ ಮಾಡಿರುವ ಆರ್ ಟಿ ಓ ಅಧಿಕಾರಿಗಳು 1.58 ಕೋಟಿ ತೆರಿಗೆ ಪಾವತಿಸಲು ಸೂಚಿಸಿದ್ದಾರೆ. ಆದರೆ ಕಾಅರಿನ ಮಾಲಿಕ ಇಷ್ಟೊಂದು ಹಣ ಪಾವತಿಸಲು ಕಾಲಾವಕಾಶ ನೀಡುವಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೆ ಹಣ ಪಾವತಿಸಲು ಡೆಡ್ ಲೈನ್ ನೀಡಲಾಗಿದೆ. ಸಂಜೆಯೊಳಗೆ 1.58 ಕೋಟಿ ತೆರಿಗೆ ಪಾವತಿಸಿ ಕಾರನ್ನು ಬಿಡಿಸಿಕೊಳ್ಳಲು ಸೂಚಿಸಲಾಗಿದೆ.