Kannada NewsKarnataka NewsLatest

*ಕಾಲೇಜು ಪ್ರಾಂಶುಪಾಲ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಲೇಜು ಉಪ ಪ್ರಾಂಶುಪಾಲ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಗುರುಬಸವಯ್ಯ ಸಾಲಿಮಠ (೫೧) ಹೃದಯಾಘಾತಕ್ಕೆ ಬಲಿಯಾದವರು. ಕಲಬುರಗಿಯ ಕೊಹಿನೂರ್ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದವರು ಸ್ವಲ್ಪ ನೀರು ಕುಡಿದಿದ್ದಾರೆ. ನೀರು ಕುಡಿಯುತ್ತಿದ್ದಂತೆಯೇ ವಾಂತಿಯಾಗಿದೆ. ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Home add -Advt

Related Articles

Back to top button