Belagavi NewsBelgaum NewsKarnataka NewsPolitics

*ಗವಾನ ಗ್ರಾಮದಲ್ಲಿ ದೇಶದ ಗಮನ ಸೆಳೆಯುವಂತಹ ಪ್ರವಾಸಿ ತಾಣ ಅಭಿವೃದ್ದಿ: ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಗುರುವಾರ ನಿಪ್ಪಾಣಿ ತಹಶೀಲ್ದಾರ ಮುಜಾಫರ ಬಳಿಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ ಕುರುಡಗಿ ಹಾಗೂ ತಾಲೂಕ ಮಟ್ಟದ ಸಮಿತಿಯ ಸದಸ್ಯರೊಂದಿಗೆ ಪ್ರವಾಸಿ ತಾಣದ ಕುರಿತು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು.

  • ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ನಿಪ್ಪಾಣಿ ಭೇಟಿ ಶಾಶ್ವತವಾಗಿ ನೆನಪಿಡಲು ಯೋಜನೆ.
  • ಅಂಬೇಡ್ಕರ್‌ ಜೀವಿಸಿದ ಪ್ರವಾಸಿ ತಾಣಗಳಲ್ಲಿ ಒಂದಾಗಿ ಅಭಿವೃದ್ದಿ
  • ರಾಜ್ಯ ಸರಕಾರದಿಂದ 1 ಕೋಟಿ 36 ಲಕ್ಷ, ಶಾಸಕರ ನಿಧಿಯಿಂದ 1 ಕೋಟಿ ಹಾಗೂ ಜೊಲ್ಲೆ ಗ್ರೂಪ್‌ ವತಿಯಿಂದ 1 ಕೋಟಿ ಹಣ ನೀಡಲಾಗುವುದು.
  • ದೇಶದ ಗಮನ ಸೆಳೆಯುವಂತಹ ಅಂಬೇಡ್ಕರ್‌ ಮ್ಯೂಸಿಯಂ, ಕ್ರಾಂತಿ ಸ್ತಂಭ, ಭೌಧ್ದ ಸ್ತೂಪ ನಿರ್ಮಾಣ.

ಸಂವಿಧಾನ ಶಿಲ್ಪಿಗಳಾದ ಡಾ ಬಿ ಆರ್‌ ಅಂಬೇಡ್ಕರ್‌ ಅವರು 1925 ರಲ್ಲಿ ನಿಪ್ಪಾಣಿಗೆ ಭೇಟಿ ನೀಡಿದ್ದರು. ಅದು ಅಂತಿಂಥ ಭೇಟಿಯಲ್ಲ, ಬದಲಿಗೆ ಅಂದಿನ ಮುಂಬೈ-ಕರ್ನಾಟಕ ಭಾಗದಲ್ಲಿ ದಲಿತರ ಸಬಲೀಕರಣಕ್ಕೆ ನಾಂದಿ ಹಾಡಿದಂತಹ ಭೇಟಿ. ಈ ಸಮಯದಲ್ಲೇ ನಿಪ್ಪಾಣಿಯಲ್ಲಿ ದಲಿತರಿಗೆಂದೇ ಹುಟ್ಟಿಕೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಅವರು, ಅಸ್ಪೃಶ್ಯರ ಮಕ್ಕಳಿಗೆ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನೂ ವಿತರಿಸಿದರು. ಈ ಭೇಟಿಯ ನೂರು ವರ್ಷಗಳ ನೆನಪನ್ನು ಅಜರಾಮರವನ್ನಾಗಿಸುವ ನಿಟ್ಟಿನಲ್ಲಿ 3.30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸುವುದಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದರು.

ದೇಶದ ಗಮನ ಸೆಳೆಯುವಂತಹ ಅಂಬೇಡ್ಕರ್‌ ಮ್ಯೂಸಿಯಂ, ಕ್ರಾಂತಿ ಸ್ತಂಭ, ಬೌದ್ದ ಸ್ತೂಪ, ಅಂಬೇಡ್ಕರ್‌ ಭವನ, ಬಡ ದಲಿತ ಮಕ್ಕಳಿಗೆ ಹಾಸ್ಟೆಲ್‌, ಅತಿಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ವನ್ನು ಇಲ್ಲಿ ಅಭಿವೃದ್ದಿಪಡಿಸಲಾಗುವುದು. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ನಿಪ್ಪಾಣಿ ನಗರಕ್ಕೆ ಆಗಮಿಸಿದ್ದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಅದನ್ನು ಯಾವತ್ತು ಶಾಶ್ವತವಾಗಿ ನೆನಪಿಡುವ ನಿಟ್ಟಿನಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಶಶಿಕಲಾ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button