
ಪ್ರಗತಿವಾಹಿನಿ ಸುದ್ದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 3 ಹುಲಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಕಸ ತಿಂದ ಪರಿಣಾಮ ಜುಲೈ 7 ರಂದು ಹಿಮಾದಾಸ್ ಹುಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಹಿಮದಾಸ್ ಮತ್ತು ಅದರ ಎರಡು ಮರಿಗಳು ಸಾವನ್ನಪ್ಪಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಹಿಮದಾಸ್ ಹುಲಿಯ ಹಾಲನ್ನು ಸೇವನೆ ಮಾಡಿದ ಬಳಿಕ ಮರಿ ಹುಲಿಗಳು ಅನಾರೋಗ್ಯಕ್ಕೀಡಾಗಿವೆ. ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಅವುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದೀಗ ಅವುಗಳು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ. ಸದ್ಯ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಪಶು ವೈದ್ಯಕೀಯ ತಂಡವು ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಒಂದು ಗರ್ಭಕಂಠಕ ಗಾಯದಿಂದ ಸಾವನ್ನಪ್ಪಿದರೆ, ಇನ್ನೊಂದು ಮರಿ ಮೆದುಳಿನ ಅಂಗಾಂಶ ಊನಗೊಂಡು ಸಾವನ್ನಪ್ಪಿದೆ. ಮತ್ತೊಂದು ಮರಿ ತಾಯಿ ತಲೆಯನ್ನು ಕಚ್ಚಿದ ಪರಿಣಾಮ ಮೆನೆಂಜಿಯಲ್ ಹೆಮಟೋಮದಿಂದ ಸಾವನ್ನಪ್ಪಿದೆ.