
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ ಐ ಶ್ರೀಶೈಲ ಹುಲಗೇರಿ ಹಾಗೂ ಸಿಬಂದಿ ಗಸ್ತು ತಿರುಗುತ್ತಿದ್ದಾಗ ಬೆಳಗಾವಿ ಸಾಂಬ್ರಾ ರಸ್ತೆಯ ಅಮನ ನಗರ ಕ್ರಾಸ್ ಬಳಿ ವ್ಯಕ್ತಿಯೊಬ್ಬ ಗಾಂಜಾ ಸೇವನೆ ಮಾಡುತ್ತಿದ್ದ. ಈತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತನನ್ನು ಶಪಿಯುಲ್ಲಾ ಮಹಮ್ಮದ್ ಗೌಸ್ ಚೂರಿಖಾನ್ (26)ಎಂದು ಗುರುತಿಸಲಾಗಿದೆ.