Kannada NewsKarnataka News

ದಿವ್ಯಾಂಗ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿದ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಅಂಗವಿಕಲ ದಿನಾಚರಣೆ ಅಂಗವಾಗಿ ಇಂದು ಬೆಳಗಾವಿಯ ಜೆ.ಎನ್.ಎಮ್.ಸಿ ಕ್ರೀಡಾಂಗಣದಲ್ಲಿ ಬೆಳಗಾವಿ ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಸ್ವಯಂ ಸೇವಾ ಸಂಘಟನೆಗಳಿಂದ ದಿವ್ಯಾಂಗ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಧ್ವಜಾರೋಹಣ ನೇರವೇರಿಸಿ, ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿ ವಿವಿಧ ಬಣ್ಣಗಳ ಬಲೂನ್ ಗಳನ್ನು ಹಾರಿಸುವ ಮೂಲಕ ಮತ್ತು ಸಾಂಕೇತವಾಗಿ ಶಾಟ್ ಪುಟ್ ಎಸೆಯುವುದರ ಮೂಲಕ ಶಾಸಕ ಅನಿಲ ಬೆನಕೆ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ  ವಿಕಲಚೇತನ ಮಕ್ಕಳು ವಿಶೇಷ ಅಲ್ಲ, ಅತೀ ವಿಶೇಷರಾಗಿದ್ದಾರೆ. ಆದ್ದರಿಂದ  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀವು ಅಂಗವಿಕಲರಲ್ಲ, ದೇವರ ಒಂದು ಅಂಗ, ಹೀಗಾಗಿ ನಿಮಗೆ ದಿವ್ಯಾಂಗ ಎಂದು ಕರೆಯಬೇಕೆಂದು ಸೂಚನೆ ನೀಡಿದರು. ಈ   ಮಕ್ಕಳ ಏಳಿಗೆಗಾಗಿ  ಎಲ್ಲ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ಶಾಸಕರು ನೀಡಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಕೆ.ಎಚ್. ಜಗದೀಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ವಿವಿಧ ಶಾಲೆಗಳ ಪ್ರಚಾರ್ಯರು, ಶಿಕ್ಷಕ ವೃಂದ, ಸಾರ್ವಜನಿಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Home add -Advt

Related Articles

Back to top button