*ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್: ಮುಡಾ ಹಗರಣದಲ್ಲಿ ಇಡಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ಮುಡಾ ಕೇಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿ ವಜಾಗೊಳಿಸಿದೆ.
ನೀವೇಕೆ ರಾಜಕೀಯಕ್ಕೆ ದಾಳವಾಗುತ್ತೀರಿ ಎಂದು ನ್ಯಾಯಾಧೀಶರು ಇಡಿ ಗೆ ಪ್ರಶ್ನಿಸಿದ್ದಾರೆ. ರಾಜಕಾರಣ ಚುನಾವಣೆಗೆ ಇರಲಿ, ನೀವು ದಾಳವಾಗಲು ಹೋಗಬೇಡಿ. ಈ ಹಿಂದೆ ಮಹಾರಾಷ್ಟ್ರದಲ್ಲಿ ಸಹ ಇಡಿ ರಾಜಕೀಯ ದಾಳವಾಗಿದ್ದನ್ನು ನೋಡಿದ್ದೇನೆ. ಹೇಳಲು ಹೋದರೆ ಬಹಳಷ್ಟಿದೆ ಎಂದು ಖಾರವಾಗಿ ಚಾಟಿ ಬೀಸಿದ್ದಾರೆ.
ನಮ್ಮ ಬಾಯಿಯನ್ನು ತೆಗೆಯಲು ಅವಕಾಶ ಕೊಡಬೇಡಿ. ಬಾಯಿ ತೆಗೆದರೆ ಬಹಳ ಕಠಿಣ ಶಬ್ಧಗಳನ್ನು ಬಳಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
