
ಪ್ರಗತಿವಾಹಿನಿ ಸುದ್ದಿ: ಕಂಠಪೂರ್ತಿ ಕುಡಿದು ಶಾಲೆಗೆ ಬಂದು ಗಡದ್ದಾಗಿ ನಿದ್ದೆಗೆ ಜಾರುತ್ತಿದ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ನಿಂಗಪ್ಪ ಅಮಾನತುಗೊಂಡಿರುವ ಹೆಡ್ ಮಾಸ್ಟರ್. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನಾಳ ಶಾಲೆಯ ಹೆಡ್ ಮಾಸ್ಟರ್ ಆಗಿದ್ದ ನಿಂಗಪ್ಪ, ಕುಡಿದು ಬಂದು ಶಾಲೆಯ ಅಡುಗೆ ಕೋಣೆ ಬಾಗಿಲಲ್ಲೇ ಮಲಗುತ್ತಿದ್ದ.
ಈ ಬಗ್ಗೆ ಸುದ್ದಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಮದ್ಯಪಾನ ಮಾಡಿ ಶಾಲೆಯ ಆವರಣದಲ್ಲಿ ಮಲಗಿದ್ದ ಹೆಡ್ ಮಾಸ್ಟರ್ ನನ್ನು ಸಸ್ಪೆಂಡ್ ಮಾಡಿದೆ. ಕರ್ತವ್ಯಲೋಪ, ದುರ್ನಡತೆ ಹಾಗೂ ಬೇಜಾವಾಬ್ದಾರಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.