
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಲಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಸುಮಾರು 33.53 ಲಕ್ಷ ರೂ, ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಭಾನುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಭೂಮಿ ಪೂಜೆ ವೇಳೆ ಸಿದ್ದು ಕುರಂಗಿ, ಚೇತನ ಕುರಂಗಿ, ರಾಜೇಶ ವಡಗಾಂವಿ, ಸರೋಜಿನಿ ವಡಗಾಂವಿ, ಲಕ್ಷ್ಮೀ ಮೇದಾರ್, ರೇಖಾ ದೇಸಾಯಿ, ರೂಪಾ ಸುತಾರ್, ಗಣಪತ್ ಎಂ, ಲಕ್ಷ್ಮೀ ಸಂತಾಜಿ, ಕೃಷ್ಣ ಸಂತಾಜಿ, ಚಂದ್ರಕಾಂತ ಕಾಮೋಜಿ, ಮಹಾವೀರ್ ಪಾಟೀಲ, ಸಾಗರ ಕಾಮನಾಚೆ, ವಿಲಾಸ ಪರಿಟ್, ಭುಜಂಗ ಸಾಲ್ಗುಡೆ, ನಜೀರ್ ಮುಲ್ಲಾ, ಆಪ್ತ ಸಹಾಯಕ ಮಹಾಂತೇಶ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.