*ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ನಗದು ಪುರಸ್ಕಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಂದ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ (ರಿ) ಅರ್ಜಿಗಳನ್ನು ಆಹ್ವಾನಿಸಿದೆ. ಪ್ರತಿಭಾಶಾಲಿ ವಿದ್ಯಾರ್ಥಿಗಳನ್ನು ಟ್ರಸ್ಟ್ ಆಯೋಜಿಸುವ ಕಾರ್ಯಕ್ರಮದಲ್ಲಿ ಗೌರವಿಸಿ ಪ್ರೋತ್ಸಾಹ ನೀಡಲಿದೆ.
ಇದೇ ಸಂದರ್ಭದಲ್ಲೇ, ಬ್ರಾಹ್ಮಣ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶೇ.70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ, ಅವರಿಗೂ ಪ್ರೋತ್ಸಾಹ ನೀಡಲು ಸೂಕ್ತ ಬಹುಮಾನ ನೀಡಿ ಸನ್ಮಾನಿಸಲಾಗುವುದು. ಈ ಉಪಕ್ರಮದ ಉದ್ದೇಶ ಬ್ರಾಹ್ಮಣ ಸಮುದಾಯದ (ಎಲ್ಲ ಉಪಜಾತಿ) ವಿದ್ಯಾರ್ಥಿಗಳನ್ನು ಶಿಕ್ಷಣದ ಕಡೆಗೆ ಪ್ರೇರೇಪಿಸುವುದಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಮ್ ಭಂಡಾರೆ ತಿಳಿಸಿದ್ದಾರೆ.
ಅರ್ಹರು ಹಾಗೂ ಆಸಕ್ತ ವಿದ್ಯಾರ್ಥಿಗಳು ಅಥವಾ ಅವರ ಪಾಲಕರು, ವಿದ್ಯಾರ್ಥಿಯ ಬಯೋಡೇಟಾ, ಅಂಕಪಟ್ಟಿ/ಪ್ರಮಾಣಪತ್ರದ ನಕಲು, ಗುರುತಿನ ದಾಖಲಾತಿ ಹಾಗೂ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಸೇರಿಸಿ 2025ರ ಆಗಸ್ಟ್ 10ರ ಒಳಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ:
ಗೌರವ ಅಧ್ಯಕ್ಷರು/ಕಾರ್ಯದರ್ಶಿಗಳು,
ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ (ರಿ), ಸೆಲೆಬ್ರೇಷನ್ ಹಾಲ್, ಅನಗೋಳ ಇಂಡಸ್ಟ್ರಿಯಲ್ ಏರಿಯಾ, ಉದ್ಯಮಬಾಗ, ಬೆಳಗಾವಿ – 590008
ಸಂಪರ್ಕ ವ್ಯಕ್ತಿಗಳು:
ಭರತ್ ದೇಶಪಾಂಡೆ, ಉಪಾಧ್ಯಕ್ಷರು, BZBST – ಮೊ: +91 94806 87580
ವಿಲಾಸ್ ಬದಾಮಿ, ಕಾರ್ಯದರ್ಶಿ, BZBST – ಮೊ: +91 98802 91605
ಚಂದ್ರಶೇಖರ ನವಲಗುಂದ -ಮೊ. 9611610642