
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬೆಂಗಳೂರು ಪಶ್ಚಿಮ ಪ್ರದೇಶಕ್ಕೆ ನೀರು ಸರಬರಾಜಾಗುವ ದೊಡ್ಡಗಾತ್ರದ ವಾಲ್ ಕೆಟ್ಟು ಹೋಗಿರುವ ಹಿನ್ನೆಲೆ ಸದರಿ ವಾಲ್ ತುರ್ತಾಗಿ ದುರಸ್ತಿಪಡಿಸಬೇಕಾಗದ ಅವಶ್ಯಕತೆ ಇರುವುದರಿಂದ ಪಶ್ಚಿಮ ಪ್ರದೇಶಕ್ಕೆ ಆ.01ರಂದು ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ.
ದೊಡ್ಡ ಗಾತ್ರದ ವಾಲ್ ಕೆಟ್ಟು ಹೋಗಿರುವುದರಿಂದ ಸದರಿ ಪ್ರದೇಶಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಿ ತುರ್ತಾಗಿ ಆ.1ರಂದು ಬೆಳಗ್ಗೆ 6ಗಂಟೆಯಿಂದ ಸದರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ಪ್ರದೇಶಕ್ಕೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು,ಇದಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ ಎಂದು ಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ನೀರು ವ್ಯತ್ಯಯವಾಗಲಿರುವ ಪ್ರದೇಶಗಳು
ಚಂದ್ರ ಲೇಔಟ್ ಫಸ್ಟ್ ಸ್ಟೇಜ್ ಸೆಕೆಂಡ್ ಸ್ಟೇಜ್. ಬಿಸಿಸಿ ಲೇಔಟ್. ಅತ್ತಿಗುಪ್ಪೆ. ಮಾರುತಿ ನಗರ. ಜ್ಯೋತಿನಗರ. ವಿದ್ಯಾ ಗಿರಿ ಲೇಔಟ್. ಗಂಗೋಂಡನ ಹಳ್ಳಿ. ನಾಯಂಡಳ್ಳಿ. ಮೆಟ್ರೋ ಲೇಔಟ್. ವಿಡಿಯೋ ಲೇಔಟ್. ಕೆಪಿಎ ಬ್ಲಾಕ್. ಬಸವೇಶ್ವರ ಲೇಔಟ್. ವಿನಾಯಕ ಲೇಔಟ್ ನಾಯಂಡಳ್ಳಿ. ಐಟಿಐ ಲೇಔಟ್ ನಾಯಂಡಳ್ಳಿ. ಪಂತರ ಪಾಳ್ಯ. ಮೈಸೂರ್ ರೋಡ್ ITI ಲೇಔಟ್. ಎಫ್ಸಿಐ ಲೇಔಟ್. ರೋಷನ್ ನಗರ. ಅರುಂಧತಿ ನಗರ.ಮಾಗಡಿ ರಸ್ತೆಯ 16 ರಿಂದ 20ನೇ ಅಡ್ಡರಸ್ತೆ, ಎರಡನೇ ಅಡ್ಡರಸ್ತೆಯಿಂದ 12ನೇ ಅಡ್ಡರಸ್ತೆ, ಕೆಂಪಾಪುರ ಅಗ್ರಹಾರ, ಅವಲಮ್ಮ ಛತ್ರ, ಬಂಡೆ ಕೊಳಚೆ ಪ್ರದೇಶ, ವಿ ಎಸ್ ಟಿ ಕಾಲೋನಿ,ಅಶ್ವತ್ ನಗರ, ಭುವನೇಶ್ವರಿ ನಗರ, ಕೇಶವ ನಗರ, ಕಸ್ತೂರಿಬಾ ನಗರಆರ್ ಪಿ ಸಿ ಬಡಾವಣೆ, ಹಂಪಿ ನಗರ, ನ್ಯೂ ಕಾಲೋನಿ, ಕವಿಕಾ ಬಡಾವಣೆ, ದೀಪಾಂಜಲಿ ನಗರ, ಮತ್ತು ವೆಂಕಟೇಶ್ವರ ನಗರ ಕೊಳಚೆ ಪ್ರದೇಶ, ಪ್ರಕಾಶ್ ನಗರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ 1ಸ್ಟೇಟಸ್ ಬ್ಲಾಕ್, ಸುಬ್ರಮಣ್ಯ ನಗರ,ಗಾಯತ್ರಿ ನಗರ, ನಂದಿನಿ ಲೇಔಟ್,ದಾಸರಹಳ್ಳಿ ಭಾಗದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.