ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ೨೦೧೯-೨೦ ನೇ ಸಾಲಿನ “ಆದ್ಯಂತ” ೯ ಮತ್ತು ೧೦ ನೇಯ ತರಗತಿಯ ವಿದ್ಯಾರ್ಥಿಗಳಿಗಾಗಿ “ಅಂತರ್ ಶಾಲಾ ಉತ್ಸವ”ವನ್ನು ಸ್ಥಳೀಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಂಗಾಯಣ ಕಲಾವಿದ ಕೃಷ್ಣಮೂರ್ತಿ ಗಾವಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿ ಜೀವನದಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಹೊರತೆಗೆದು ಅನಾವರಣ ಮಾಡುವಲ್ಲಿ ಇಂತಹ ಕಾರ್ಯಕ್ರಮ ತುಂಬಾ ಮುಖ್ಯ, ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಪ್ರಧಾನ” ಎಂದರು.
“ಆದ್ಯಂತ” ಕಾರ್ಯಕ್ರಮದಲ್ಲಿ ಸುಮಾರು ೮ ವಿಧದ ಚಟುವಟಿಕೆಗಳು ನಡೆದವು. ರಸಪ್ರಶ್ನೆ, ನೃತ್ಯ, ಚರ್ಚೆ, ಹಾಡು, ಜಾಹಿರಾತು, ಕಿರುಚಿತ್ರ, ಕಿರುಪ್ರಹಸನ, ಅನಿರೀಕ್ಷಿತ ಸ್ಪರ್ಧೆ ವಿಭಾಗಗಳಲ್ಲಿ ಹಲವಾರು ಶಾಲೆಗಳಿಂದ ಸುಮಾರು ೧೬೦ಕ್ಕೂ ಹೆ ಶಾಲೆಗಳಿಂದ ಸುಮಾರು ೧೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗ ಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಗಳ ಸಂಚಾಲಕರಾಗಿ ಅಭಿಷೇಕ ಕುಂಬಾರ, ಮಹೇಶ ಕಲ್ಲೋಳ್ಳಿ, ಉಮೇಶ ಚಿಕ್ಕೋಡಿ ನಡೆಸಿಕೊಟ್ಟರು.
ಬೆಳಿಗ್ಗೆ ೯ ರಿಂದ ಸಂಜೆ ೬ ರವರಗೆ ವಿವಿಧ ಕಾರ್ಯಕ್ರಮಗಳು ನಡೆದವು. ಸಂಜೆ ಮುಕ್ತಾಯ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ೩೦ ಕ್ಕೂ ಹೆಚ್ಚು ಬಹುಮಾನಗಳನ್ನು ಮತ್ತು “ಸಮಗ್ರ ವೀರಾಗ್ರಣಿ” ಪಾರಿತೋಷಕಗಳನ್ನು ನೀಡಲಾಯಿತು.
ನಗರದ “ಪ್ರೀಶಿಯಸ್ ಬ್ಲೋಸಮ್ಸ” ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸಮಗ್ರ ವೀರಾಗ್ರಣಿ ಮತ್ತು ಬೆನ್ಸನ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡರು.
ಕಾಲೇಜಿನ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಯಂಸೇವಕರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಉತ್ಸವದಲ್ಲಿ ಪಾಲ್ಗೊಂಡಿರುವ ವಿವಿಧ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಹೇಶ ಕಾಲೇಜಿನ ಕಾರ್ಯವೈಖರಿ ಮತ್ತು ಕಾರ್ಯಕ್ರಮ ಸಂಘಟನೆಯ ಕುರಿತು ಮೆಚ್ಚುಗೆಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಗಾಂವಕರ, ರಾಗಿಣಿ ಹುದಲಿಕರ, ಶಿವಾನಂದ ಚಿಕ್ಕಮಠ, ಗುರುಮೂರ್ತಿ ಭಟ್ಟ್, ಅಕ್ಷಯ ಕುಮಾರ ಕುಲ್ಕರ್ಣಿ ಮುಂತಾದ ಅನೇಕರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಮಧ್ಯಾಹ್ನದ ಊಟ ಮತ್ತು ಸಂಜೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರಾಚಾರ್ಯ ಎಂ ವಿ ಭಟ್ಟ , ಆನಂದ ಖೋತ್, ಮುಕುಂದ ಗೋಖಲೆ ಹಾಗೂ ವಿವಿಧ ಗಣ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೇ ಇಡೀ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಸಂಘಟಿಸಿದ್ದು ವಿಶೇಷವಾಗಿತ್ತು. ಐಶ್ವರ್ಯ ಅಡವಿ ಕಾರ್ಯಕ್ರಮ ನಿರ್ವಹಿಸಿದರು. ಆನಂದ ಖೋತ್ ಸ್ವಾಗತಿಸಿದರು. ಬಾಲಕೃಷ್ಣ ನಾಯಕ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ