
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ಸುತ್ತಮುತ್ತಲಿನ ಕಾಡಿನಲ್ಲಿ ಹಾಗೂ ನೇತ್ರಾವತಿ ನದಿ ತಟದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಅಪರಿಚಿತ ವ್ಯಕ್ತಿ ನೀಡಿರುವ ದೂರಿನ ಆಧಾರದ ಮೇಲೆ ಸರ್ಕಾರ ಎಸ್ ಐ ಟಿ ರಚನೆ ಮಾಡಿ ತನಿಖೆ ಮಾಡುತ್ತಿದ್ದು, ಮತ್ತೋರ್ವ ವ್ಯಕ್ತಿ ಎಸ್ಐಟಿ ಮುಂದೆ ಹಾಜರಾಗಿದ್ದಾನೆ.
ಅನಾಮಿಕ ವ್ಯಕ್ತಿ ಧರ್ಮಸ್ಥಳದ ಕಾಡಿನಲ್ಲಿ ತೋರಿಸಿದ 13 ಸ್ಥಳಗಳ ಪೈಕಿ ಈಗಾಗಲೇ 10 ಕಡೆ ಉತ್ಖನನ ನಡೆಸಲಾಗಿದೆ. ಅದರಲ್ಲಿ ಒಂದು ಕಡೆ ಮಾತ್ರ ಮೊಳೆಗಳು ಸಿಕ್ಕಿವೆ. ಉಳಿದ 3 ಕಡೆ ಸೋಮುವಾರ ಉತ್ಖನನ ನಡೆಯಲಿದ್ದು, ಈ ಕೇಸ್‌ನಲ್ಲಿ ಮತ್ತೊಬ್ಬ ದೂರುದಾರ ಎಸ್‌ಐಟಿ ಮುಂದೆ ಹಾಜರಾಗಿ ದೂರು ನೀಡಲು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.
ಬುರುಡೆ ರಹಸ್ಯ ಬೇಧಿಸುತ್ತಿರುವ ಎಸ್‌ಐಟಿ ತಂಡದ ತನಿಖೆಯ ಪ್ರಕ್ರಿಯೆ ನಡುವೇ ಪ್ರಕರಣವು ಇದೀಗ ಮಹತ್ವದ ತಿರುವು ಪಡೆದಂತಾಗಿದೆ. ಜಯಂತ್ ಟಿ ಎಂಬುವವರು ದೂರು ನೀಡಲು ಮುಂದಾಗಿದ್ದಾರೆ.