ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉಪ-ಚುನಾವಣೆಯ ಮತ ಎಣಿಕೆಯ ನಿಮಿತ್ತ ಬೆಳಗಾವಿ ನಗರದಲ್ಲಿ ಸೋಮವಾರ ಸಂಚಾರ ಮಾರ್ಗ ಬದಲಾವಣೆ ಹಾಗೂ ನಿರ್ಬಂಧ ಮಾಡಲಾಗಿದೆ.
ಅಥಣಿ, ಕಾಗವಾಡ ಹಾಗೂ ಗೋಕಾಕ ಮತಕ್ಷೇತ್ರಗಳಿಗೆ ಜರುಗಿದ ಉಪಚುನಾವಣೆಯ ಮತ ಎಣಿಕೆಯು ಬೆಳಗಾವಿ ನಗರದ ಆರ್ಪಿಡಿ ಕಾಲೇಜಿನಲ್ಲಿ ಜರುಗಲಿದ್ದು, ಮತ ಎಣಿಕೆ ಕಾರ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಕುರಿತು ಈ ಕೆಳಗಿನಂತೆ ವ್ಯವಸ್ಥೆ ಮಾಡಲಾಗಿದೆ.
೧) ಅಭ್ಯರ್ಥಿಗಳು: ಆರ್ಪಿಡಿ ಕಾಲೇಜ್ನ ೧ನೇ ಗೇಟ್ ಮೂಲಕ ಪ್ರವೇಶಿಸಿ ಆಫೀಸ್ ಕಟ್ಟಡದ ಹತ್ತಿರ ಅಭ್ಯರ್ಥಿಗಳು ಇಳಿದು ತಮ್ಮ ವಾಹನಗಳನ್ನು ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ಕುರಿತು ಕಳುಹಿಸಿಕೊಡುವುದು.
೨) ಏಜೆಂಟರು: ವಾಹನಗಳಲ್ಲಿ ಬರುವ ಏಜೆಂಟರು ಆರ್ಪಿಡಿ ಕಾಲೇಜ್ ವಿದ್ಯಾರ್ಥಿಗಳ ವಾಹನ ನಿಲುಗಡೆ ಮಾಡುವ ಸ್ಥಳ (ಯುನಿಯನ್ ಬ್ಯಾಂಕ್ ಹತ್ತಿರ) ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವುದು.
೩) ಮಾಧ್ಯಮ ಪ್ರತಿನಿಧಿಗಳು: ಮಾಧ್ಯಮ ಪ್ರತಿನಿಧಿಗಳು ಭಾಗ್ಯ ನಗರ ೨ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೋಸೈಟಿ ದಾಟಿ ಎಡತಿರುವು ಪಡೆದುಕೊಂಡು ಮಾವಿನ ತೋಟದ ಗೇಟ್ ಮೂಲಕ ಆರ್ಪಿಡಿ ಕಾಲೇಜ್ ಮೈದಾನದಲ್ಲಿ ತಮಗೆ ನಿಗಧಿಗೊಳಿಸಿರುವ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.
೪) ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ: ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಆರ್.ಓ, ಎಆರ್ಓ, ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಭಾಗ್ಯ ನಗರ ೨ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿ ಪರ್ಪಸ್ ಕೋ-ಆಪರೇಟಿವ ಸೋಸೈಸಿ ದಾಟಿ ಎಡತಿರುವು ಪಡೆದುಕೊಂಡು ಮಾವಿನ ತೋಟದ ಗೇಟ ಮೂಲಕ ಆರ್ಪಿಡಿ ಕಾಲೇಜ್ ಮೈದಾನದಲ್ಲಿ ವಾಹನಗಳನ್ನು ಪಾರ್ಕ ಮಾಡಿ ಮತ ಎಣಿಕೆ ಕೇಂದ್ರಕ್ಕೆ ಹೋಗುವುದು.
೫) ಸಾರ್ವಜನಿಕರು: ಮತ ಎಣಿಕೆ ದಿವಸ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಲೇಲೆ ಮೈದಾನ ಹಾಗೂ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ನಿಲುಗಡೆಗೊಳಿಸುವುದು.
೬) ನೋ-ಪಾರ್ಕಿಂಗ್ ಝೋನ: ಮತ ಎಣಿಕೆ ದಿವಸದಂದು ೧)ಗೋವಾವೇಸ್ ಸರ್ಕಲ್ದಿಂದ ಬಿಗ್ ಬಜಾರ ಕ್ರಾಸ್ ವರೆಗಿನ ಖಾನಾಪೂರ ರಸ್ತೆ, ಹಾಗೂ ೨)ಗೋಗಟೆ ಸರ್ಕಲ್ ದಿಂದ ೩ನೇ ರೇಲ್ವೆ ಗೇಟವರೆಗಿನ ಕಾಂಗ್ರೇಸ್ ರಸ್ತೆ ಹಾಗೂ ೩)ಆರ್ಪಿಡಿ ಸರ್ಕಲ್ ದಿಂದ ಸೋಮವಾರ ಪೇಠ ಕ್ರಾಸ್ ವರೆಗಿನ ದೇಶಮುಖ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
೭) ಡೈವರ್ಶನ್:
I. ಗೋವಾವೇಸ್ ಸರ್ಕಲ್ ಕಡೆಯಿಂದ ಆರ್ಪಿಡಿ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳ ಸಂಚರಣೆಯನ್ನು ನಿಷೇಧಿಸಿದ್ದು, ಎಲ್ಲ ವಾಹನಗಳು ಮಹಾವೀರ ಭವನ ಹತ್ತಿರ ಎಡತಿರುವ ತೆಗೆದುಕೊಂಡು ಗುರುದೇವ ರಾನಡೆ ರಸ್ತೆ, ಭಗತ ಸಿಂಗ್ ಗಾರ್ಡನ ಪಕ್ಕದ ರಸ್ತೆಯ ಮೂಲಕ ಆದರ್ಶ ನಗರ, ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದಿಂದ ಭಾಗ್ಯ ನಗರ ೧೦ನೇ ಕ್ರಾಸ್ ಮುಖಾಂತರ ಅನಗೋಳ ಹರಿ ಮಂದಿರ ಕ್ರಾಸ್, ಬಿಗ್ ಬಜಾರ್ ಕ್ರಾಸ್, ೩ನೇ ರೇಲ್ವೆ ಗೇಟ್ ಮೂಲಕ ಖಾನಾಪೂರ ರಸ್ತೆ ಸೇರುವುದು.
II. ೩ನೇ ರೇಲ್ವೆ ಗೇಟ್ ಮೂಲಕ ಗೋವಾವೇಸ್ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಕಾಂಗ್ರೇಸ್ ರಸ್ತೆ ಮುಖಾಂತರ ಗೋಗಟೆ ಸರ್ಕಲ್ ಹತ್ತಿರ ಬಲ ತಿರುವು ಪಡೆದುಕೊಂಡು ರೇಲ್ವೆ ಓವರ್ ಬ್ರಿಜ್ ಸೇರಿ ಮುಂದೆ ಸಾಗುವುದು.
III. ಸೋಮವಾರ ದಿನಾಂಕ: ೦೯/೧೨/೨೦೧೯ ರಂದು ಬೆಳಿಗ್ಗೆ ೭ ಗಂಟೆಯಿಂದ ಸಾಯಂಕಾಲ ೭ ಗಂಟೆಯವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸಲು ನಿಷೇಧಿಸಲಾಗಿದೆ.
೮) ಮತ ಎಣಿಕೆ ಸಮಯದಲ್ಲಿ ಬರುವ ಅಧಿಕಾರಿ, ಸಿಬ್ಬಂದಿ ಜನರು, ಅಭ್ಯರ್ಥಿಗಳು ಹಾಗೂ ಏಜೆಂಟರು ಮೋಬೈಲ್, ಗುಟಖಾ ಪಾಕೇಟ್, ಇಂಕಪೆನ್, ಕ್ಯಾಮೆರಾ, ಬೆಂಕಿ ಪೊಟ್ಟಣ, ಸಿಗರೇಟ್, ಲೈಟರ್ ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳನ್ನು ತಮ್ಮೊಂದಿಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ