
ಪ್ರಗತಿವಾಹಿನಿ ಸುದ್ದಿ: ಆನ್ ಲೈನ್ ಗೇಮ್ ಆಡಲು ಹಣ ನೀಡುವಂತೆ ಕಾಟ ಕೊಡುತ್ತಿದ್ದ ಅಕ್ಕನ ಮಗನನ್ನೇ ಮಾವ ಹತ್ಯೆಗೈದಿರುವ ಘಟನೆ ನಡೆದಿದೆ.
14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ. ನಾಗಪ್ರಸಾದ್ ಕೊಲೆಗೈದಿರುವ ಮಾವ. ಬಾಲಕ ಅಮೋಘ್ ನಾಗಪ್ರಸಾದ್ ಅಕ್ಕನ ಮಗ. ಕಳೆದ ಎಂಟು ತಿಂಗಳಿಂದ ನಾಗಪ್ರಸಾದ್ ಜೊತೆ ಬಾಲಕ ವಾಸವಾಗಿದ್ದ. ಫೀಫೈರ್ ಆನ್ ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದ ಬಾಲಕ ಪ್ರತಿದಿನ ಹಣ ಕೊಡುವಂತೆ ಕೇಳುತ್ತಿದ್ದನಂತೆ.
ಅಲ್ಲದೇ ವಾರದ ಹಿಂದೆ ಹಣ ಕೊಡುವಂತೆ ಹೇಳಿ ನಾಗಪ್ರಸಾದ್ ಮೇಲೆ ಬಾಲಕ ಹಲ್ಲೆ ನಡೆಸಿದ್ದನಂತೆ. ಈ ಘನೆಯಿಂದ ಬೇಸತ್ತ ನಾಗಪ್ರಸಾದ್, ಇದೀಗ ಬಾಲಕನ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಬಳಿಕ ನಾಗಪ್ರಸಾದ್ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಬಳಿಕ ಎಲ್ಲಿಗಾದರೂ ಹೋಗೋಣವೆಂದು ಮೆಜೆಸ್ಟಿಕ್ ಗೆ ಬಂದು ಮೂರು ದಿನ ಬಸ್ ನಿಲ್ದಾಣದಲ್ಲೇ ಕಾಲ ಕಳೆದಿದ್ದಾನಮ್ತೆ. ಇದೀಗ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.