Karnataka NewsLatest

*ರ್ಯಾಗಿಂಗ್ ಗೆ ವಿದ್ಯಾರ್ಥಿನಿ ಬಲಿ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿಯೊಬ್ಬಳು ರ್ಯಾಗಿಂಗ್ ಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಅಂಜಲಿ ಮುಂಡಾಸ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಗುಳೇದಗುಡ್ಡದ ಭಂಡಾರಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಸಹಪಾಠಿಗಳೇ ರ್ಯಾಗಿಂಗ್ ಮಾಡುತ್ತಿದ್ದರಂತೆ. ಈ ಬಗ್ಗೆ ಡೆತ್ ನೋಟ್ ಬರೆದಿಟ್ತು ಸಾವಿಗೆ ಶರಣಾಗಿದ್ದಾಳೆ.

ನಿನ್ನೆ ಕೂಡ ವಿದ್ಯಾರ್ಥಿನಿಗೆ ಸಹಪಾಠಿಗಳು ಕಾಲೇಜ್ ನಲ್ಲಿ ರ್ಯಾಗಿಂಗ್ ಮಾಡಿದ್ದರಂತೆ. ನನ್ನ ಸಾವಿಗೆ ಕಾರಣರಾದವರು ಈ ಮೂವರು. ಸಹಪಾಠಿಗಳಾದ ವರ್ಷಾ, ಪ್ರದೀಪ್ ಹಾಗೂ ಇನ್ನಿತರ ಸ್ನೇಹಿತರು. ರ್ಯಾಗಿಂಗ್ ಮಾಡುತ್ತಿದ್ದು, ಮಾನಸಿಕವಾಗಿ ನನ್ನನ್ನು ಕುಗ್ಗಿಸಿದ್ದಾರೆ. ಇವರನ್ನು ಸುಮ್ಮನೇ ಬಿಡಬಾರದು ಎಂದು ಅಂಜಲಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.

Home add -Advt

Related Articles

Back to top button