ಪ್ರಗತಿವಾಹಿನಿ ಸುದ್ದಿ, ಚೆನ್ನೈ
ಚೆನ್ನೈ: ಅವಿವಾಹಿತ ದಂಪತಿಗಳು ಹೋಟೆಲ್ ಕೋಣೆಯಲ್ಲಿ ಉಳಿಯುವುದು ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಅದನ್ನು ಅಪರಾಧೀಕರಿಸಲು ಯಾವುದೇ ಕಾನೂನುಗಳಿಲ್ಲ ಎಂದು ಅದು ಹೇಳಿದೆ.
ಈ ವರ್ಷ ಜೂನ್ 25 ರಂದು ಕೊಯಮತ್ತೂರಿನ ಹೈರ್ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಹೋಟೆಲ್ ಕೋಣೆಯಲ್ಲಿ ಪೊಲೀಸ್ ಮತ್ತು ಕಂದಾಯ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಒಂದು ಕೋಣೆಯಲ್ಲಿ ಅವಿವಾಹಿತ ದಂಪತಿಗಳು ಮತ್ತು ಮದ್ಯದ ಬಾಟಲಿಗಳು ಕಂಡುಬಂದಿದ್ದವು ಮತ್ತು ಅಪಾರ್ಟ್ಮೆಂಟ್ ಸ್ವಾಧೀನಕ್ಕೆ ಪಡೆಯಲಾಗಿತ್ತು.
ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು ಪೊಲೀಸ್ ಕ್ರಮವನ್ನು ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಸ್.ರಮೇಶ್ , ಪ್ರಕರಣದಲ್ಲಿ, ಕಾನೂನುಬಾಹಿರ ಮತ್ತು ‘ಸಾಮಾನ್ಯ ಕಾನೂನು’ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ