*ಮೂಡಲಗಿ : ಏಷಿಯನ್ ಟೇಕ್ವಾಂಡೋ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ*

ಬಲಗೈಯ ಇಲ್ಲದೆ ಹುಟ್ಟಿದ ಮಗುವನ್ನು ನೋಡಿದ ತಂದೆ ತಾಯಿ ಅಂದು ಕಣ್ಣೀರು ಹಾಕಿದ್ದರು: ಇಂದು ನಾಡೇ ಮೆಚ್ಚುವ ಹಾಗೆ ಸಾಧನೆ ಮಾಡಿರುವ ಲಕ್ಷ್ಮೀ ರಡರಟ್ಟಿ
ಪ್ರಗತಿವಾಹಿನಿ ಸುದ್ದಿ: ಮಲೇಶಿಯಾದಲ್ಲಿ ಇತ್ತಿಚೆಗೆ ಜರುಗಿದ ಏಷೀಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮೀ ರಡರಟ್ಟಿ ಅವರನ್ನು ಗುರುವಾರ ಮೂಡಲಗಿ ಯಲ್ಲಿ ತೆರೆದ ವಾಹನದಲ್ಲಿ ಮೇರವಣಿಗೆ ಮೂಲಕ ಸ್ವಾಗತಿಸಲಾಯಿತು.
ಮಲೇಶಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪಾ ರಡರಟ್ಟಿ ಗುರುವಾರ ಸಂಜೆ ತವರೂರಿಗೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ , ಸನ್ಮಾನಗಳು ಜರುಗಿದವು.

ಮೂಡಲಗಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪಟ್ಟಣದ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಹಾಗೂ ಸನ್ಮಾನಿಸಿ ಬರಮಾಡಿಕೊಂಡರು .
ಸಂಸ್ಥೆಯಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಜರುಗಿತು.
ಅಂದು ಬಲಗೈಯ ಇಲ್ಲದೆ ಹುಟ್ಟಿದ ಮಗುವನ್ನು ನೋಡಿದ ತಂದೆ ತಾಯಿ ಕಣ್ಣೀರು ಹಾಕಿದ್ದರು. ಇಂದು ಲಕ್ಷ್ಮೀ ರಡರಟ್ಟಿ ನಾಡೇ ಮೆಚ್ಚುವ ಹಾಗೆ ಸಾಧನೆ ಮಾಡಿದ್ದಾರೆ.
ಝಾಂಜ ಪಥಕ್, ವಿವಿಧ ವಾಧ್ಯ ಮೇಳದೊಂದಿಗೆ ಮಂಜುನಾಥ ಸೈನಿಕ ತರಬೇತಿ ಪ್ರಶಿಕ್ಷಣಾರ್ಥಿಗಳ ಉದ್ದನೆಯ ಸಾಲು , ನೂರಾರು ಸಂಖ್ಯೆಯ ಮಹಿಳೆಯರು, ದಾರಿಯುದ್ದಕ್ಕೂ ಪಟಾಕಿ, ಬಾಣ ಬಿರುಸುಗಳು ಮೆರವಣಿಗೆಗೆ ಮೆರಗು ನೀಡಿದವು . ದಾರಿಯುದ್ದಕ್ಕೂ ಲಕ್ಷ್ಮೀ ಸಾಧನೆಗೆ ಜೈಕಾರ ಹಾಕಿದರು.