
ಪ್ರಗತಿವಾಹಿನಿ ಸುದ್ದಿ: ಸಚಿವ ಸಂಪುಟದಿಂದ ಸಚಿವ ಕೆ.ಎನ್.ರಾಜಣ್ಣ ವಜಾ ಮಾಡಿರುವ ವಿಚಾರವಾಗಿ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಷಡ್ಯಂತ್ರ ಆಗಿರುವುದು ನಿಜ ಎಂದು ಹೇಳಿದ್ದಾರೆ
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಆತಂತರಿಕ ವಿಚಾರಗಳು ಬಂದಾಗ ಬಹಿರಂಗ ಹೇಳಿಕೆ ಕೊಟ್ಟಾಗ ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತೆ. ಅದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ರೀತಿ. ರಾಜಣ್ಣ ವಿಚಾರದಲ್ಲಿಯೂ ಹೀಗೆ ಆಗಿದೆ. ಮುಂದೆ ಯಾವತ್ತೂ ಇಂತಹ ಘಟನೆ ಆಗಬಾರದು ಎಂಬ ನಿಟ್ಟಿನಲ್ಲಿ ಹೈಕಮಾಂಡ್ ಎಚ್ಚರಿಕೆ ಸಂದೇಶ ನೀಡಿದೆ ಎಂದರು.
ಷಡ್ಯಂತ್ರ ಇರುವುದು ಸಹಜ. ರಾಜಕೀಯ ಕ್ಷೇತ್ರದಲ್ಲಿ ಇಂತಹ ಷಡ್ಯಂತ್ರಗಳನ್ನು ಎದುರುಸಿಯೇ ಮುಂದೆ ಹೋಗಬೇಕಾಗುತ್ತದೆ. ರಾಜಣ್ಣ ಕೂಡ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗಿತ್ತು, ಹಾಗಂತ ರಾಜಣ್ಣ ಸುಮ್ಮನೇ ಕೂರುವ ವ್ಯಕ್ತಿ ಅಲ್ಲ. ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಏನು ಮಾಡಬೇಕು ಮಾಡ್ತಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಗಮನಿಸಿದ ಹಾಗೇ ಹಲವು ವರ್ಷಗಳಿಂದ ರಾಜಣ್ಣ ಅವರನ್ನು ನೋಡಿದ್ದೇನೆ. ಅವರು ಸ್ವಲ್ಪ ನಿಷ್ಠುರವಾದಿ. ನೇರವಾಗಿ ಮಾತನಾಡುವಂತಹ ವ್ಯಕ್ತಿ ಎಂದು ಹೇಳಿದರು.