
ಪ್ರಗತಿವಾಹಿನಿ ಸುದ್ದಿ: ಮತಗಳ್ಳತನ ನಡೆದಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗ ಕಿಡಿಕಾರಿದೆ.
ಮತಗಳ್ಳತನ ಆರೋಪ ಪ್ರಕರಣ ಸಂಬಂಧ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯೋಗದ ವಿರುದ್ಧ ಇದೊಂದು ಗಂಭೀರವಾದ ಆರೋಪ. ಮತಗಳ್ಳತನಾಗಿದೆ ಎಂಬ ನಿಮ್ಮ ಆರೋಪ ಸರಿಯಲ್ಲ. ಮತದಾರನ ಅನುಮತಿ ಇಲ್ಲದೇ ಆತನ ಫೋಟೊ, ವಿಳಾಸಗಳನ್ನು ಬಿಡುಗಡೆ ಮಾಡಿರುವುದು ಅಪರಾಧ. ಆಯೋಗ ರಾಜಕೀಯ ಪಕ್ಷಗಳ ನಡುವೆ ಭೇದ-ಭಾವ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಮಗೆ ಆಡಳಿತ ಹಾಗೂ ವಿಪಕ್ಷಗಳು ಎರಡೂ ಒಂದೇ. ಆಯೋಗದ ವಿರುದ್ಧ ಆರೋಪ ಮಾಡಿದ ತಕ್ಷಣ ಇದರಿಣ್ದ ಆಯೋಗ ಹೆದರಲ್ಲ. ಸಾಂವಿಧಾನಿಕ ಕರ್ತವ್ಯದಿಂದ ಆಯೋಗ ಹಿಂದೆಸರಿಯಲ್ಲ. ಬಿಹಾರದಲ್ಲಿ ಎಸ್ ಐಆರ್ ಪ್ರಕ್ರಿಯೆಆರಂಭವಾಗಿದೆ. ಬಿಹಾರದ 7 ಕೋಟಿ ಜನ ಚುನಾವಣಾ ಆಯೋಗದೊಂದಿಗೆ ಇದ್ದಾರೆ. ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.