
ಪ್ರಗತಿವಾಹಿನಿ ಸುದ್ದಿ: ನಟಿ, ಮಾಜಿ ಸಂಸದೆ ರಮ್ಯಾಗೆ ನಟ ದರ್ಶನ್ ಫ್ಯಾನ್ಸ್ ಹೆಸರಲ್ಲಿ ಅಶ್ಲೀಲ ಸಂದೇಶ ರವಾನಿಸಿದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮೂಲದ ಸುಜನ್ ಹಾಗೂ ಆದರ್ಶ ಬಂಧಿತ ಆರೋಪಿಗಳು. ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಈ ಹಿಂದೆ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಗೂ ಸಂದೇಶ ರವಾನಿಸಿದ್ದ ಏಳು ಜನರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು. ಮಂಜುನಾಥ್, ಭುವನ್ ಗೌಡ, ಪವನ್, ಓಬಣ್ಣ, ಗಂಗಾಧರ ಸೇರಿ ಏಳು ಜನರನ್ನು ಬಂಧಿಸಲಾಗಿತ್ತು ಇದೀಗ ಮತ್ತಿಬ್ಬರನ್ನು ಅರೆಸ್ಟ್ ಮಾಡಲಾಗಿದೆ.