Kannada NewsLatestNational
*ಸಂಸತ್ ನಲ್ಲಿ ಮತ್ತೆ ಭದ್ರತಾ ವೈಫಲ್ಯ: ಮರ ಹತ್ತಿ ಗೋಡೆ ಏರಿ ಸಂಸತ್ ಭವನ ಪ್ರವೇಶಿಸಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ಸಂಸತ್ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯವಾಗಿದೆ. ವ್ಯಕ್ತಿಯಿಬ್ಬ ಮರವನ್ನು ಹತ್ತಿ ಗೋಡೆ ಏರಿ ಸಂಸತ್ ಒಳಗೆ ಪ್ರವೇಶಿಸಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ರೈಲ್ ಭವನದ ಕಡೆಯಿಂದ ಗೋಡೆ ಮೇಲೆ ಹಾರಿರುವ ವ್ಯಕ್ತಿ ಹೊಸ ಸಂಸತ್ ಕಟ್ಟಡದ ಗರುಡ ಗೇಟ್ ನ್ನು ತಲುಪಿದ್ದಾನೆ. ಸಂಸತ್ ಒಳಗೆ ನುಗ್ಗಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.
ಸದ್ಯ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸಂಸತ್ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯವಾಗಿದೆ. ಅಧಿವೇಶನ ಮುಕ್ತಾಯವಾದ ಒಂದು ದಿನದ ಬಳಿಕ ಭದ್ರತಾ ಉಲ್ಲಂಘನೆಯಾಗಿದೆ.