Belagavi NewsBelgaum NewsKannada NewsKarnataka NewsPolitics
*ಲಕ್ಷ್ಮಣ ಸವದಿ ಒಬ್ಬ ಮೋಸಗಾರ: ರಮೇಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಅಥಣಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಆಗಮಿಸಿದ್ದ ರಮೇಶ ಜಾರಕಿಹೊಳಿ ಆರ್. ಎಸ್. ಪಿ ಸಭಾ ಭವನದಲ್ಲಿ ಕಾರ್ಯಕರ್ತರನ್ನುದ್ದೆಸಿಸಿ ಮಾತನಾಡುವ ವೇಳೆ ಶಾಸಕ ಲಕ್ಷ್ಮಣ ಸವದಿ ಒಬ್ಬ ಮೋಸಗಾರ ಎಂದು ಕಿಡಿ ಕಾರಿದ್ದಾರೆ.
ವಿಧಾನಸಭೆ ಚುನಾವಣೆ ಬಳಿಕ ಸೈಲೆಂಟ್ ಇದ್ದ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಮತ್ತೆ ವರಸೆ ಶುರು ಮಾಡಿದ್ದಾರೆ. ಸವದಿ ಒಬ್ಬ ಗ್ರಾಮ ಪಂಚಾಯತ್ ಸದಸ್ಯನಾಗೋಕು ಯೋಗ್ಯನಲ್ಲ. ಆತನಿಗೆ ನಮ್ಮ ಫಲವಾಗಿ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಪದವಿ ಸಿಕ್ಕಿತ್ತು. ಆದರೆ ಆತ ನಮ್ಮ ಉಪಕಾರ ಅರಿಯದ ವ್ಯಕ್ತಿ ಎಂದು ವ್ಯಂಗ್ಯವಾಡಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಗವಾಡದಿಂದ ಶ್ರೀನಿವಾಸ್ ಪಾಟೀಲ್ ಹಾಗೂ ಅಥಣಿಯಿಂದ ಮಹೇಶ ಕುಮಠಳ್ಳಿ ಸ್ಪರ್ಧೆ ಖಚಿತ ಎಂದು ಹೇಳಿದರು.
ಜಾರಕಿಹೊಳಿ ಕುಟುಂಬ ಲಿಂಗಾಯತ ವಿರೋಧಿಗಳಲ್ಲ ಡಿಸಿಸಿ ಬ್ಯಾಂಕ್ ಕಾರ್ಯದರ್ಶಿ ಚುನಾವಣೆ ಬಳಿಕ ಲಿಂಗಾಯತರಿಗೆ ಮೊದಲ ಆದ್ಯತೆ ಎಂದು ಭರವಸೆ ನೀಡಿದರು.