Latest

ಸೋನಿಯಾ ಬರ್ತ್ ಡೇ ವಿಶೇಷ, ಒಂದು ಕೆ.ಜಿ ಈರುಳ್ಳಿ Free

ಪ್ರಗತಿವಾಹಿನಿ ಸುದ್ದಿ, ಪುದುಚೇರಿ.

ದೇಶದಲ್ಲಿ ಈರುಳ್ಳಿ ಚರ್ಚೆಯ ಪ್ರಮುಖ ವಿಷಯ ಆಗಿಬಿಟ್ಟಿದೆ, ಈರುಳ್ಳಿಗಾಗಿ ಜನರು ನೂರಾರು ರೂ. ಖರ್ಚು ಮಾಡುತ್ತಿದ್ದಾರೆ. ಆದರೆ ಇಲ್ಲಿ ಅದೇ ಈರುಳ್ಳಿ ಉಚಿತವಾಗಿ ಸಿಕ್ಕಿದೆ. ಹೌದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಕಿಲೋ ಉಚಿತ ಈರುಳ್ಳಿ ಸಿಕ್ಕಿದೆ. ಅದು ಎಲ್ಲಿ ? ಏಕೆ ಅಂತೀರಾ ?….. ಉತ್ತರ , ಪುದುಚೇರಿಯಲ್ಲಿ….

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜನ್ಮ ದಿನವನ್ನು ಪಕ್ಷದ ಕಾರ್ಯಕರ್ತರು ವಿಭಿನ್ನವಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಕೆ.ಜಿ ಈರುಳ್ಳಿಯನ್ನು ಉಡುಗೊರೆ ಎಂದು ನೀಡಲಾಗಿದೆ. ಈ ರೀತಿ ವಿಭಿನ್ನವಾಗಿ ಸೋನಿಯಾ ಗಾಂಧಿ ಅವರ ಜನ್ಮದಿನವನ್ನು ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹಾಗೂ ಕಾರ್ಯಕರ್ತರು ಆಚರಿಸಿದರು.

 

Related Articles

Back to top button