Kannada NewsKarnataka NewsNational

*ದಸರಾ ಉದ್ಘಾಟಕರಾಗಿ ಬಾನು ಮುಸ್ತಾಕ್ ಆಯ್ಕೆ ಸ್ವಾಗತಿಸಿದ ಸಂಸದ ಯದುವೀರ್ ಒಡೆಯರ್*

ಪ್ರಗತಿವಾಹಿನಿ ಸುದ್ದಿ: ಈ ಬಾರಿಯ ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಸರ್ಕಾದ ಈ ನಡೆಯನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ.‌ ಆದರೆ  ಸಂಸದ ಯದುವೀರ್ ಒಡೆಯರ್ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದು, ಈ ಮೂಲಕ ಬಿಜೆಪಿಗೆ ಮುಖಭಂಗವಾಗಿದೆ.‌

ಕೊಡಗಿನ ವಿರಾಜಪೇಟೆಯಲ್ಲಿ ಮಾತಾನಾಡಿದ ಸಂಸದ ಯದುವೀರ್, ಬಾನು ಮುಷ್ಕಾಕ್ ಅವರು ಖ್ಯಾತ ಬರಹಗಾರ್ತಿ, ಅಂತಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಹೋರಾಟದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕು ಕೊಡಬೇಕು. ಮಸೀದಿಗಳಿಗೆ ತೆರಳಲು ಅವಕಾಶ ಕೋಡಬೇಕು ಎಂದು ಬಾನು ಮುಸ್ತಾಕ್ ಅವರು ಈ ಹಿಂದೆ ಸಾಮಾಜಿಕ ಬಹಿಷ್ಕಾರವನ್ನು ಕೂಡ ಎದುರಿಸಿದ್ದರು ಎಂದು ತಿಳಿಸಿದ್ದಾರೆ.

ದಸರಾ ಉದ್ಘಾಟಕರಾಗಿ ಬಾನು ಮುಸ್ತಾಕ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಮಾಡಿದ್ರು.  ಅವರ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದರು. ಈಗ ಸ್ವತಃ ಬಿಜೆಪಿ ಸಂಸದ ಯದುವೀರ್ ಬಾನು ಮುಸ್ತಾಕ್ ಆಯ್ಕೆಗೆ ಸ್ವಾಗತಿಸಿದ್ದಾರೆ‌.

Home add -Advt

Related Articles

Back to top button