*ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ: ಡಿಕೆ ಶಿವಕುಮಾರ*

ಪ್ರಗತಿವಾಹಿನಿ ಸುದ್ದಿ: ಈ ಬಾರಿಯ ದಸರಾ ಉದ್ಘಾಟಕರಾಗಿ ಲೇಖಕಿ ಬಾನು ಮುಸ್ತಾಕ ಅವರನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಆಹ್ವಾನ ನೀಡಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಬಾನು ಮುಸ್ತಾಕ್ ಅವರು ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಲಿ ಎಂದು ಬಿಜೆಪಿ ನಾಯಕರು ಹೇಳುತಿದ್ದು, ಚಾಮುಂಡಿ ಬೆಟ್ಟ ಹಿಂದುಗಳೊಬ್ಬರ ಆಸ್ತಿಯಲ್ಲ ಎಂದು ಡಿಕೆ ಶಿವಕುಮಾರ ಹೇಳಿಕೆ ನೀಡಿದ್ದಾರೆ.
‘ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ’ ಅವರ ನಂಬಿಕೆ ಅದು. ನಾವು ಮಸೀದಿ, ಜೈನ್ ಟೆಂಪಲ್, ಗುರುದ್ವಾರಕ್ಕೆ ಹೋಗುತ್ತೇವೆ.
ನಮ್ಮನ್ನು ಹೋಗಬೇಡಿ ಅಂತ ಯಾರಾದರೂ ಹೇಳಿದ್ದಾರಾ? ಮುಸ್ಲಿಂಮರು ಹಿಂದೂಗಳಾಗಿಲ್ವ?ಹಿಂದೂಗಳು ಮುಸ್ಲಿಂ ಆಗಿಲ್ವ? ಅಯೋಧ್ಯೆ ರಾಮನಿಗೆ ಯಾಕೆ ಹಿಂದೂಗಳು ಮಾತ್ರ ಬರಬೇಕು ಅಂತ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೂ ದೇವಸ್ಥಾನಗಳಿಗೆ ಸಾಕಷ್ಟು ಜನ ಮುಸ್ಲಿಮರು ಬರುತ್ತಾರೆ. ಎಲ್ಲ ಧರ್ಮದ ಜನ ಕೂಡ ಹಿಂದೂ ದೇವಸ್ಥಾನಗಳಿಗೆ ಹೋಗುತ್ತಾರೆ. ಇದು ಸಂವಿಧಾನದ ಮೇಲೆ ನಂಬಿಕೆ ಇರುವ ರಾಷ್ಟ್ರ. ಹಿಂದೂ ಹುಡುಗ ಮುಸ್ಲಿಂ ಮಹಿಳೆ ಇದ್ದರೆ, ಅವರ ಮಗು ಯಾವ ಧರ್ಮ ಬೇಕೋ ಅದನ್ನು ಆಚರಣೆ ಮಾಡುತ್ತದೆ.
ಬಾನು ಮುಸ್ತಾಕ್, ಕನ್ನಡದಲ್ಲಿ ಬರೆದಾಗ ಯಾರು ಯಾಕೆ ಬರೆದೆ ಅಂತ ಕೇಳಲಿಲ್ಲ ಎಂದು ಹೇಳಿದ್ದಾರೆ. ನಾವು ಧರ್ಮದಲ್ಲಿ ರಾಜಕಾರಣ ಮಾಡಲ್ಲ. ಸಂವಿಧಾನ ಮತ್ತು ಜಾತ್ಯಾತೀತ ತತ್ವದಲ್ಲಿ ಇರುವ ರಾಷ್ಟ್ರ ಎಂದು ಹೇಳಿದ್ದಾರೆ.