*ಯಾವುದೇ ಕಾರಣಕ್ಕೂ ಮಕ್ಕಳು ಶಾಲೆ ಬಿಡಬೇಡಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ*

ಕರಿಕಟ್ಟಿಯಲ್ಲಿ 2 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ
ಪ್ರಗತಿವಾಹಿನಿ ಸುದ್ದಿ: ಕರಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 30.16 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಹಿಂದಿನಿಂದಲೂ ಆದ್ಯತೆ ನೀಡುತ್ತಿಲ್ಲ. ಹಾಗಾಗಿ ನಾನು ಶಾಸಕಿಯಾದ ನಂತರ ಶೈಕ್ಷಣಿಕ ಮೂಲ ಸೌಕರ್ಯ ಸೃಷ್ಟಿಗೆ ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ಯಾವುದೇ ಕಾರಣದಿಂದ ವಂಚಿತರಾಗಬಾರದೆನ್ನುವುದೇ ನನ್ನ ಧ್ಯೇಯ. ಪ್ರತಿ ಊರಲ್ಲಿ ಅಗತ್ಯವಿರುವಷ್ಟು ಕೊಠಡಿ, ಶೈಕ್ಷಣಿಕ ಉಪಕರಣ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಕಾರಣದಿಂದ ಮಕ್ಕಳು ಶಾಲೆ ಬಿಡಬಾರದು ಎಂದು ಸಚಿವರು ಕರೆ ನೀಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಚನಬಸ್ಸು ಧರನಟ್ಟಿ, ಯಲ್ಲಪ್ಪ ಕರಡಿಗುದ್ದಿ, ದುರಗಪ್ಪ ದಾಸನಟ್ಟಿ, ರಮೇಶ ಕಪರಟ್ಟಿ, ಸಿದರು ಕಪರಟ್ಟಿ, ತುಕಾರಾಮ ಕರಡಿಗುದ್ದಿ, ಯಲ್ಲಪ್ಪ ಧರನಟ್ಟಿ. ಯಲ್ಲಪ್ಪ ನಾಯಿಕ, ಸಿದರು ಕಪರಟ್ಟಿ ಮುಂತಾದವರು ಉಪಸ್ಥಿತರಿದ್ದರು.