
ಪ್ರಗತಿವಾಹಿನಿ ಸುದ್ದಿ: ಕಾರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಬ್ಧಾರಾಕಾರ ಮಳೆಯಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ತೋಟ-ಗದ್ದೆಗಳು ಜಲಾವೃತಗೊಂಡಿದ್ದು, ಕೊಳೆರೋಗ ಶುರುವಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಜೋಯಿಡಾ ತಾಲೂಕಿನ ಎಲ್ಲೆಡೆ ಅಡಿಕೆ ತೋಟಕ್ಕೆ ಅಡಿಕೆ ಕೊಳೆರೋಗ ಕಾಣಿಸಿಕೊಂಡಿದೆ. ಬಿಟ್ಟು ಬಿಡದೇ ಸುರುಯುತ್ತಿರುವ ಮಳೆಗೆ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗೆ ಕೊಳೆರೋಗ ಬಂದಿದ್ದು, ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ನಂದಿಗದ್ದಾ ಗ್ರಾಮ ಪಂಚಾಯತ ದ ಅವುರ್ಲಿ, ನಂದಿಗದ್ದೆ, ಚಿಂಚಖಂಡ, ಕರಿಯಾದಿ, ಬೆಡಸಗದ್ದೆ, ಯರಮುಖ, ಶೇವಾಳಿ, ಗುಂದ ಈ ಎಂಟು ಗ್ರಾಮ ಗಳ ತೋಟ ಗಳಿಗೆ ಅಡಿಕೆ ಕೊಳೆ ರೋಗ ಭಾರಿ ಪ್ರಮಾಣ ದಲ್ಲಿ ಬಂದಿದ್ದು ಬಿದ್ದ ಅಡಿಕೆ ಸುಲಿಯಲೂ, ಬಾರದೇ, ಒಣಗಿಸಲು ಬಿಸಿಲೂ ಇಲ್ಲದೇ, ಕೊಳೆಯುತ್ತ ಇರುವುದನ್ನು ನೋಡಲು ಸಾಧ್ಯವಿಲ್ಲ ಎಂದು ರೈತರು ಕಣ್ಣಿರಿಟ್ಟಿದ್ದಾರೆ. ಈ ವರ್ಷ ಬೆಳೆ ಕಡಿಮೆ ಇದ್ದು, ಅದರಲ್ಲೂ ಕೊಳೆಯಿಂದ ಅಡಿಕೆ ಬಿದ್ದು ಹೋದರೆ, ಸಾಲ ಮಾಡಿ ಜೀವನ ನಿರ್ವಹಿಸುತ್ತಿರುವ, ಕೃಷಿಕರ ಪಾಡೇನು? ನಮ್ಮ ಮುಂದಿನ ಜೀವನ ನಿರ್ವಹಣೆ ತುಂಬಾ ಕಷ್ಟ ಕರವಾಗಿದೆ ಸರಕಾರ ಪರಿಹಾರ ನೀಡಿ ನಮಗೆ ಬದುಕುವ ಅವಕಾಶ ನೀಡಲಿ ಎಂದು ಅನ್ನದಾತರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಅಡಿಕೆ ಬೆಳೆಗಾರರಾದ ಅವುರ್ಲಿ ಗ್ರಾಮದ ಸೋಮಣ್ಣ ವೇಳಿಫ್ ಅಡಿಕೆಗೆ ಕೊಳೆ ರೋಗಬಂದಿದ್ದು, ನಾವು ಕಷ್ಟ ಪಟ್ಟು ಬೆಳೆದ ಬೆಳೆ ಹಾಳಾಗುತ್ತಿದೆ, ಬೀಳುವ ಅಡಿಕೆ ಪ್ರತಿದಿನ ಆರಿಸಲು ಆಗುತ್ತಿಲ್ಲ, ಒಂದೆಡೆ ನಿರಂತರ ಮಳೆ, ಮತ್ತೊಂದೆಡೆ ಸತತವಾಗಿ ಉದುತ್ತಲೇ ಇರುವ ಕೊಳೆ ಅಡಿಕೆ ರೈತರ ಬದುಕು ದುಸ್ತರವಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.