
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ಐತಿಹಾಸಿಕ ಕೆಂಪು ಕೋಟಿಯ ಉದ್ಯಾನವನದಲ್ಲಿ ಬರೋಬ್ಬರಿ 1 ಕೋಟಿ ಮೌಲ್ಯದ ವಜ್ರ-ಮಾಣಿಕ್ಯ, ಚಿನ್ನಾಭರಣ ಕಳ್ಳತನವಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೆಂಪುಕೋಟೆ ಉದ್ಯಾನವನದಲ್ಲಿ ಜೈನ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ, ಮಾಣಿಕ್ಯ, ಚಿನ್ನ, ಪಚ್ಚೆ ಕಳ್ಳತನಾಗಿದೆ. ಕಳುವಾದ ವಸ್ತುಗಳಲ್ಲಿ 760 ಗ್ರಾಂ ತೀಕದ ಚಿನ್ನದ ಝರಿ, ಚಿನ್ನದಿಂದ ಮಾಡಿದ ತೆಂಗಿನ ಕಾಯಿ ಹಾಗೂ ವಜ್ರಗಳು, ಮಾಣಿಕ್ಯ, ಪಚ್ಚೆಗಳಿಂದ ಕೂಡಿದ ಸಣ್ಣ ಝರಿ ಸೇರಿವೆ.
ಉದ್ಯಮಿ ಸುಧೀರ್ ಜೈನ್ ಪ್ರತಿದಿನ ಪೂಜೆಗೆ ಕಲಶ ತರುತ್ತಿದರು. ಕಳೆದ ಮಂಗಳವಾರ ಕಾರ್ಯಕ್ರಮದ ಮಧ್ಯೆ ವೇದಿಕೆಯಿಂದ ಅದು ಕಳುವಾಗಿದೆ. ಶಂಕಿತ ವ್ಯಕ್ತಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶೀಘ್ರದಲ್ಲಿ ಆತನನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.