Belagavi NewsBelgaum NewsKannada NewsKarnataka NewsLatest

*ಸಚಿವರ ಎದುರೇ ಗಂಡನ ಕಪಾಳಕ್ಕೆ ಹೊಡೆದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಅಧಿಕಾರಿಗಳ ಬಡಿದಾಟ ತಾರಕ್ಕೇರಿದೆ. ಸಚಿವ ಸತೀಶ್ ಜಾರಕಿಹೊಳಿ ಎದುರೇ ಮಹಿಳೆಯೊಬ್ಬರು ತನ್ನ ಗಂಡನ ಕಪಾಳಕ್ಕೆ ಬಾರಿಸಿರುವ ಘಟನೆ ನಡೆದಿದೆ.

ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಅವರ ಕಾಲರ್ ಹಿಡಿದು ಎಳೆದಾಡಿ, ಕಪಾಳಕ್ಕೆ ಪತ್ನಿ ಹೊಡೆದಿದ್ದಾಳೆ. ಜಾರಕಿಹೊಳಿಗೆ ಬೆಂಬಲ ನೀಡಿದ್ದಾಕ್ಕಾಗಿ ಪತ್ನಿ, ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ದಂಪತಿಗಳ ಜಗಳ ಬಿಡಿಸುವಷ್ಟರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುಸ್ತಾಗಿದ್ದಾರೆ.

ರಂಗೇರಿದ ಡಿಸಿಸಿ ಬ್ಯಾಂಕ್ ಚುನಾವಣೆ
ಗಂಡ ಹೆಂಡತಿ ಜಗಳ ಬಿಡಿಸಲು ಸಚಿವ ಸತೀಶ ಜಾರಕಿಹೊಳಿ ಸುಸ್ತೋ ಸುಸ್ತು..!
ಚಿಕ್ಕೋಡಿ: ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಫೈಟ್ ತಾರಕಕ್ಕೇರಿದೆ. ಸಚಿವ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಪ್ರತಿಷ್ಠೆಗಾಗಿ ಫೈಟ್ ಜೋರಾಗಿದ್ದು ಇಬ್ಬರ ನಡುವಿನ ತಿಕ್ಕಾಟ ಶಾಂತವಾಗಿದ್ದ ಹುಕ್ಕೇರಿ ಕ್ಷೇತ್ರದಲ್ಲಿ ಗಲಾಟೆಗೆ ಸಾಕ್ಷಿಯಾಗಿದೆ.

Home add -Advt

ಇದಕ್ಕೆ ಸಾಕ್ಷಿ ಎನ್ನುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಸಚಿವ ಸತೀಶ ಜಾರಕಿಹೊಳಿ‌ ಎದುರೇ ಗಲಾಟೆ ಆಗಿದ್ದು ಸಚಿವ ಸತೀಶ ಜಾರಕಿಹೊಳಿ ಬೆಂಬಲಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕನ ಪತ್ನಿ ನಿರ್ದೇಶಕನ ಕೊರಳು ಪಟ್ಟಿ ಹಿಡಿದು ಎಳೆದಾಡಿ ಎಳೆದು ಕಪಾಳ ಮೋಕ್ಷ ಮಾಡಿದ್ದಾಳೆ.

ಜಾರಕಿಹೊಳಿಗೆ ಬೆಂಬಲ ನೀಡಿದ್ದ ಗಂಡನಿಗೆ ರೋಡ್‌ನಲ್ಲಿಯೇ ತರಾಟೆ ತೆಗೆದುಕೊಂಡಿದ್ದಾಳೆ.ಮದಿಹಳ್ಳಿ ಪಿಕೆಪಿಎಸ್ ಸದಸ್ಯ ಮಾರುತಿ ಸನದಿಗೆ ಪತ್ನಿ ಲಗಮವ್ವ ಏಟು ನೀಡಿದ್ದಾಳೆ. ಗಂಡ ಹೆಂಡತಿ ಜಗಳ ಬಿಡಿಸಲು ಸಚಿವ ಸತೀಶ್ ಜಾರಕಿಹೊಳಿ ಸುಸ್ತಾಗಿ ಹೋಗಿದ್ದಾರೆ.

ಮದಿಹಳ್ಳಿ ಗ್ರಾಮದ ಪಿಕೆಪಿಎಸ್ ಕಚೇರಿ ಎದುರು ಗಲಾಟೆ ಸಂಭವಿಸಿದೆ. ಪಿಕೆಪಿಎಸ್ ಒಳಗೆ ಸಚಿವ ಸತೀಶ್ ಜಾರಕಿಹೊಳಿ ತೆರಳಿದ ಬಳಿಕ ಮತ್ತೆ ಪತಿಯನ್ನ ಜಾರಕಿಹೊಳಿ‌ ಸಹೋದರರು ಹೈ ಜಾಕ್ ಮಾಡಿ ಕರೆದೋಯ್ದಿದ್ದಾರೆ‌. ಇನ್ನೂ ಘಟನೆ ನಡೆದ ಸ್ಥಳಕ್ಕೆ ಬಂದ ಮಾಜಿ ಸಂಸದ ರಮೇಶ್ ಕತ್ತಿ ಕೂಡ ಬಂದ ಕಾರಣ ಎರಡು ಗುಂಪುಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಗಲಾಟೆ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ ಮತದ ಚುನಾಚಣೆಯ ಮತ ನಾಮನಿರ್ದೇಶಮ ಮಾಡುವ ನಿರ್ದೇಶಕರ ಸಭೆಯನ್ನ ಮುಂದೂಡಲಾಯಿತು.


Related Articles

Back to top button