
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧಕ್ಕೆ ಹೆತ್ತ ತಾಯಿಯೇ ಮಕ್ಕಳನ್ನು ಕೊಲೆಗೈದು ಪ್ರೊಯಕರನೊಂದಿಗೆ ಓಡಿ ಹೋಗುತ್ತಿರುವ ಹಲವಾರು ಘಟನೆಗಳು ಬೆಳಕಿಗೆ ಬರುತ್ತಿವೆ. ನಾಲ್ಕು ವರ್ಷದ ಮಗು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಪ್ರಿಯತಮನೊಂದಿಗೆ ಸೇರಿ ತಾಯಿ ಮಗುವನ್ನೇ ಕೊಂದು ಸುಟ್ಟು ಹಾಕಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ರಾಣೆಬೆನ್ನೂರು ತಾಲೂಕಿನ ಗುಡ್ಡದ ಅನ್ವೇರಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗಂಗಮ್ಮ ಗುತ್ತಲ (36) ಎಂಬ ಮಹಿಳೆ ತನ್ನ ಪ್ರಿಯಕರ ಗೌರಿಶಂಕರ ನಗರದ ಅಣ್ಣಪ್ಪ ಮಡಿವಾಳದ (40) ಜೊತೆ ಸೇರಿ 4 ವರ್ಷದ ಮಗು ಪ್ರಿಯಾಂಕಾಳನ್ನು ಹತ್ಯೆಗಿದ್ದಾಳೆ.
ಗಂಗಮ್ಮ ಎರಡು ತಿಂಗಳ ಹಿಂದೆ ಪತಿ ಮಂಜುನಾಥ್ ನನ್ನು ಬಿಟ್ಟು ತಮ್ಮ ಮಗುವಿನೊಂದಿಗೆ ಅಣ್ಣಪ್ಪನ ಜೊತೆ ಅನ್ವೇರಿ ಗ್ರಾಮದಲ್ಲಿ ವಾಸವಾಗಿದ್ದಳು. ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾಳೆ. ಬಳಿಕ ಮಗುವಿನ ಶವವನ್ನು ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಕಾಲುವೆ ಬಳಿ ಸಾಗಿಸಿ ಸುಟ್ಟು ಹಾಕಿದ್ದಾಳೆ. ಮಗುವಿನ ಅರ್ಧದೇಹ ಮಾತ್ರ ಸುಟ್ಟಿತ್ತು. ಇನ್ನರ್ಧ ಹಾಗೇ ಇತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ,ಆಹಿತಿ ನೀಡಿದ್ದಾರೆ. ಮಗು ಗುರುತು ಪತ್ತೆಯಾಗದ ಕಾರಣ ಅಪಚಿತ ಮಗುವಿನ ಶವ ಎಂದು ಪೊಲೀಸರೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಇತ್ತ ಮಗುವಿನ ತಂದೆ ಮಂಜುನಾಥ ತನಗೆ ತನ್ನ ಮಗಳನ್ನು ಕೊಡು ಎಂದು ಪತ್ನಿಗೆ ಕೇಳಿದ್ದಾನೆ. ಅದಕ್ಕೆ ಪತ್ನಿ ಕಥೆ ಕಟ್ಟಿದ್ದಾಳೆ. ನನ್ನ ಮಗು ನನಗೆ ಕೊಡು ನೀನು ಬೇಕಿದ್ದರೆ ಅಣ್ಣಪ್ಪನ ಜೊತೆ ಇರು ಎಂದು ಹೇಳಿದಾಗ ಮಗುವಿಗೆ ಹುಷಾರಿಲ್ಲ, ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ. ಯಾವಾಗ ಕೇಳಿದರೂ ಒಂದೊಂದು ಹೊಸ ಕಥೆ ಹೇಳುತ್ತಿದ್ದಳು. ಬೇರೆ ದಾರಿ ಕಾಣದೇ ಮಮ್ಜುನಾಥ್, ತನಗೆ ತನ್ನ ಮಗುವನ್ನು ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪೊಲೀಸರು ಗಂಗಮ್ಮ ಹಾಗೂ ಅಣ್ಣಪ್ಪ ಇಬ್ಬರನ್ನೂ ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಮಗುವನ್ನು ಕೊಲೆ ಮಾಡಿ, ಸುಟ್ಟು ಹಾಕಿರುವ ವಿಷಯವನ್ನು ದುರುಳರು ಬಾಯ್ಬಿಟ್ಟಿದ್ದಾರೆ.