Film & EntertainmentKannada NewsKarnataka NewsLatest

*ವಿನಯ್ ರಾಜಕುಮಾರ್ ಜೊತೆ ಡೇಟಿಂಗ್ ಎಂದವರಿಗೆ ಖಡಕ್ ಉತ್ತರ ಕೊಟ್ಟ ನಟಿ ರಮ್ಯಾ*

ಪ್ರಗತಿವಾಹಿನಿ ಸುದ್ದಿ: ನಟಿ ರಮ್ಯಾ ವಿನಯ್ ರಾಜಕುಮಾರ್ ಜೊತೆ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದವು. ನಟಿ ರಮ್ಯಾ ಫೋಟೋಗಳಿಗೆ ಹಲವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಬರೆದುಕೊಂಡಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಮ್ಯಾ `ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ.. ನನಗೆ ಸಹೋದರ ಸಮಾನರು ವಿನಯ್ ರಾಜ್‌ಕುಮಾರ್. ನಿಮ್ಮ ಕಲ್ಪನೆ, ಮಾತುಗಳಿಗೆ ಹಿಡಿತವಿರಲಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ನಟಿ ರಮ್ಯಾ ಅಮೆರಿಕದಲ್ಲಿ ಫುಲ್ ಮಸ್ತಿ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಈ ಬಾರಿ ನಟಿ ರಮ್ಯಾ ಅತಿಥಿಯಾಗಿ ಹೋಗಿದ್ದಾರೆ. ಸಮಾರಂಭದ ಬಿಡುವಿನ ವೇಳೆ ಅಮೆರಿಕದ ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. 

ಈ ಬಾರಿಯ ನಾವಿಕ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ ಕೂಡ ಹೋಗಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ ವಂದಿತಾ ಕೂಡಾ ಇವರ ಜೊತೆಗಿದ್ದಾರೆ.

ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ಫೋಟೋಗಳ ಜೊತೆಗೆ ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ `ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button