
ಪ್ರಗತಿವಾಹಿನಿ ಸುದ್ದಿ: ಸ್ವಂತ ತಮ್ಮನ ಹೆಂಡತಿಯನ್ನೇ ಅಣ್ಣ ಚಾಕುವಿನಿಂದ ಇರಿದು ಕೊಂದಿದ್ದ ಘಟನೆ ಎರಡು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.
ವ್ಯಕ್ತಿಯೋರ್ವ ತಮ್ಮನ ಹೆಂಡತಿಯನ್ನು ಗುದ್ದಲಿಯಿಂದ ಹೊಡೆದು ಹತ್ಯೆಗೈದಿದ್ದಾನೆ. ಜೋಯಿಡಾದ ಆಮಶೇತ–ಕೊಲೆಮಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಭಾಗ್ಯಶ್ರೀ ಸೋನು ವರಕ (35) ಕೊಲೆಯಾದ ಮಹಿಳೆ. ಧೊಂಡು ಗಂಗಾರಾಮ ವರಕ (50) ಕೊಲೆಮಾಡಿರುವ ಆರೋಪಿ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ರಾಮನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.