Kannada NewsKarnataka NewsLatest
*ಈ ಮೂರು ದಿನ ನೀರು ಪೂರೈಕೆ ಸ್ಥಗಿತ: ಮುಂಚಿತವಾಗಿ ನೀರು ಸಂಗ್ರಹಿಸಿಕೊಳ್ಳಲು ಸೂಚನೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿಗರಿಗೆ ಜಲಮಂಡಳಿ ಬಿಗ್ ಶಾಕ್ ನೀಡಿದೆ. ಮೂರು ದಿನಗಳ ಕಾಲ ಕಾವೇರಿ ನೂರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದೆ.
ಕಾವೇರಿ ನೀರು ಸರಬರಾಜು ವಿವಿಧ ಹಂತಗಳ ಯಂತ್ರಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಿಂದ ಮೂರು ದಿನಗಳ ಕಾಲ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂಚಿತವಗೈ ಸಾರ್ವಜನಿಕರು ನೀರು ಸಂಗ್ರಹಿಸಿಕೊಳ್ಳಿ ಎಂದು ಸೂಚನೆ ನೀಡಿದೆ.
ಸೆಪ್ಟೆಂಬರ್ 15, 16 ಹಾಗೂ 17ರಂದು ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಕಾವೇರಿ 5ನೇ ಹಂತ ಸೆಪ್ಟೆಂಬರ್.15ರಿಂದ ಬೆಳಿಗ್ಗೆ 1 ರಿಂದ ಸೆಪ್ಟೆಂಬರ್.17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ
ಕಾವೇರಿ 1, 2, 3, 4,ರಲ್ಲಿ ಸೆಪ್ಟೆಂಬರ್ 16ರ ಬೆಳಿಗ್ಗೆ 6ರಿಂದ ಸೆಪ್ಟೆಂಬರ್ 17ರ ಬೆಳಿಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ನೀರು ಸರಬರಾಜು ಬಂದ್ ಆಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.