
ಪ್ರಗತಿವಾಹಿನಿ ಸುದ್ದಿ: 2024-2025ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಕೊನೇ ದಿನವಾಗಿದೆ. ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ತೆರಿಗೆ ಇಲಕಹೆ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 30ರವರೆಗೆ ಐಟಿಆರ್ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂಬುದು ಸುಳ್ಳು ಸುದ್ದಿ. ಐಟಿಆರ್ ಸಲ್ಲಿಕೆಗೆ ಇಂದೇ ಕೊನೇ ದಿನವಾಗಿದ್ದು, ಯಾವುದೇ ಕಾರಣಕ್ಕೆ ದಿನಾಂಕ ವಿಸ್ತರಿಸುವುದಿಲ್ಲ ಎಂದು ತಿಳಿಸಿದೆ.
ತೆರಿಗೆದಾರರು ಅಧಿಕೃತ ಆದಾಯ ತೆರಿಗೆ ಆಫ್ ಇಂಡಿಯಾ ಎಕ್ಸ್ ಹ್ಯಾಂಡಲ್ ನ್ನು ಮಾತ್ರ ಅವಲಂಭಿಸಬೇಕು ಎಂದು ತಿಳಿಸಿದೆ. ಸಹಾಯವಾಣಿ ಕೂಡ 24X7 ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದೆ.
ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಇಂದೇ ಫೈಲ್ ಮಾಡಿ. ಯಾವುದೇ ದಂಡವನ್ನು ತಪ್ಪಿಸಲು ಆಡಿಟ್ ಮಾಡದ ತೆರಿಗೆದಾರರು ತಮ್ಮ ಐಟಿಆರ್ ಗಳನ್ನು ಇಂದೇ ಸಲ್ಲಿಸಬೇಕು. ಯಾವುದೇ ಗಡುವು ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.