Belagavi NewsBelgaum NewsKannada NewsKarnataka NewsPolitics

*ಸಮಾಜದ ಪ್ರತಿಯೊಬ್ಬರಿಗೂ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ತರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯ: ಶಾಸಕ ಆಸೀಫ್ ಸೇಠ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಪ್ರಜೆಗಳ ಆಡಳಿತಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ’ಯಲ್ಲಿದ್ದು, ಸಮಾಜದ ಪ್ರತಿಯೊಬ್ಬರಿಗೂ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ತರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಏಕತೆ ಮತ್ತು ಸಮಾನತೆಯ ಸಂಕೇತವಾಗಿದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುವರ್ಣ ವಿಧಾನಸೌಧ ಸೆಂಟ್ರಲ್ ಹಾಲ್ ನಲ್ಲಿ ಸೋಮವಾರ (ಸೆ.15) ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ನಾಲ್ಕು ಸ್ಥಂಭಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯ ಮಾಡಿದಲ್ಲಿ ದೇಶವನ್ನು ಸದೃಢ ರಾಷ್ಟ್ರವನ್ನಾಗಿ ಮಾಡಬಹುದಾಗಿದೆ. ಸಂವಿಧಾನದ ಒಬ್ಬ ಮತದಾರನಿಗೆ ಒಂದು ಮತ ಎಂಬ ಮಹತ್ವದ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ಮತದಾರ ಇದನ್ನು ಅರಿತು ತಮ್ಮ ಹಕ್ಕನ್ನು ಚಲಾಯಿಸಿ ಉತ್ತಮ ನಾಯಕರನ್ನು ಮಾತ್ರ ಆಯ್ಕೆ ಮಾಡಬಹುದು ಎಂದರು.

ಪ್ರಜೆಗಳ ತಮ್ಮ ಆಡಳಿತ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯಾದ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಬಹು ದೊಡ್ಡ ಅಸ್ತ್ರವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗಾಗಿ ನಿಡಿದ ಹಕ್ಕುಗಳ ಕುರಿತು ಪ್ರತಿಯೊಬ್ಬರು ಅರಿತುಕೊಳ್ಳಬೇಕು.

Home add -Advt

ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳನ್ನು ನಿಡಿದ್ದು ಈ ಕುರಿತು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ ಅದನ್ನುನ ಪಾಲನೆ ಮಾಡುವುದು ಪ್ರತಿಯೊಬ್ಬ ಭಾರತಿಯರ ಕರ್ತವ್ಯವಾಗಿದೆ ಎಂದು ಶಾಸಕರಾದ ಆಸೀಫ್(ರಾಜು) ಸೇಶ ನುಡಿದರು.

ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ ಅವರು ಮಾತನಾಡಿ ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳ ಪೈಕಿ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗಿದೆ. ಪ್ರಗತಿಪರ ಚಿಂತಕರ, ಸಂತರ ಚಿಂತನೆಗಳ ಮೇಲೆ ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಂತಿದೆ.

12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿಯೇ ಪ್ರಜಾಪ್ರಭುತ್ವ ಜಾರಿಯಲ್ಲಿತ್ತು. ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕು ದೊರಕಿದೆ. ಪ್ರಬುದ್ಧ ಭಾರತದಲ್ಲಿ ಪ್ರತಿಯೊಬ್ಬರು ಸಂವಿಧಾನದ ಅಡಿಯಲ್ಲಿನ ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಅರಿತುಕೊಳ್ಳಬೇಕಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ ವಿಭಿನ್ನತೆಯಲ್ಲಿಯೂ ಏಕತೆ ನಮ್ಮ ದೇಶದ ಮೂಲ ಮೌಲ್ಯವಾಗಿದೆ. ಈ ಮೂಲ ಮೌಲ್ಯಗಳು ನಮ್ಮ ಪೂರ್ವಜರಿಂದ ನಡೆದುಕೊಂಡು ಬಂದಿದ್ದು, ಇದರಲ್ಲಿನ ಮೌಲ್ಯಗಳನ್ನು ಒಗ್ಗೂಡಿಸಿ ರಚಿಸಿದ ಪುಸ್ತಕವೇ ಸಂವಿಧಾನವಾಗಿದೆ ಎಂದರು.

ದ್ವೇಷಕಾರುವವರಿಗೆ ಪ್ರೀತಿ ತೋರಿಸಿದಲ್ಲಿ ಜೀವನದ ಮೂಲ ತತ್ವ ಅರಿಯ ಬಹುದಾಗಿದೆ. ಸಂವಿಧಾನ ರಕ್ಷಣೆ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರಜಾಪ್ರಭುತ್ವ ನಮ್ಮ ದೇಶದ ಶಕ್ತಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತರಾದ ಹೃಷಿಕೇಶ ದೇಸಾಯಿ ಅವರು ಮಾತನಾಡಿ ಸರಕಾರ ರಚನೆ ಆಗುವದಕ್ಕೂ ಮುಂಚೆ ಆಗಿನ ಕುಟುಂಬಗಳಲ್ಲಿ ಘಟಕಗಳಿರುತ್ತಿದ್ದವು ಮನೆಯ ಹಿರಿಯರು ಕಾನೂನುಗಳನ್ನು ಮನೆಯ ಪ್ರತಿಯೊಬ್ಬರು ಪಾಲಿಸಬೇಕಾಗಿತ್ತು. ಭಯ ಹಾಗೂ ಪ್ರೀತಿ ಕೂಡಿದ ಸರಕಾರಗಳನ್ನು ಇಂದಿನ ಆಧುನಿಕ ಕಾಲದ ಶೀಲಾಯುಗದಲ್ಲಿ ಕಾಣಬಹುದಾಗಿದೆ ಎಂದರು.

ಭಾರತ ದೇಶ ಸ್ವಾತಂತ್ರ್ಯವಾದಂತಹ ಸಂದರ್ಭದಲ್ಲಿ ಅನೇಕ ಮಹಾನ ನಾಯಕರು ಇದ್ದರು. ಸ್ವಾತಂತ್ರ್ಯ ನಂತರ ಭಾರತ ಗಣರಾಜ್ಯವಾದ ಸಂದರ್ಭ ಅತೀ ಮುಖ್ಯವಾಗಿತ್ತು ಇದರಿಂದಾಗಿ ದೇಶದಲ್ಲಿ ಸಮಾನತೆಯ ಹಕ್ಕು ದೊರಕಿದಂತಾಯಿತು. ಜಗತ್ತಿನ ಅಂದಾಜು ನೂರು ರಾಷ್ಟ್ರಗಳು ಪ್ರಜಾಪ್ರಭುತ್ವನ್ನು ಅಳವಡಿಸಿಕೊಂಡಿವೆ. ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸರಕಾರಗಳು ಆಡಳಿತದಲ್ಲಿದ್ದರು ಸಹ ಪ್ರಜಾಪ್ರಭುತ್ವದ ಅನ್ವಯ ಆಡಳಿತ ನಡೆಸುತ್ತಿವೆ. ಎಲ್ಲರ ಮನಸ್ಸಿನ ಒಳ್ಳೆಯ ಅಂಶಗಳನ್ನೊಳಗೊಂಡತಹ ಪುಸ್ತಕವೇ ಸಂವಿಧಾನವಾಗಿದೆ. ಭಾರತಿಯರಿಗೆ ದೇಶಬಿಟ್ಟು ವಿದೇಶಗಳಿಗೆ ಹೊದಂತಹ ಸಂದರ್ಭದಲ್ಲಿ ನಮ್ಮ ಸಂವಿಧಾನದ ಮಹತ್ವ ಎನೆಂಬುವದು ಮನವರಿಕೆಯಾಗುತ್ತದೆ ಎಂದು ವಿವಿಧ ರಾಷ್ಟ್ರಗಳ ಉದಾಹರಣೆಯೊಂದಿಗೆ ಹಿರಿಯ ಪತ್ರಕರ್ತರಾದ ಹೃಷಿಕೇಷ ದೇಸಾಯಿ ಅವರು ಸವಿವರವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ.ಕೆ.ಎಂ, ಪೊಲಿಸ್ ಆಯುಕ್ತರಾದ ಭೋರಸೆ ಗುಲಾಬರಾವ್ ಭೂಷಣ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ಅಭಿನವ ಜೈನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೋಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುನುಂಮತಪ್ಪ ಪೂಜಾರಿ ಅವರು ಸಂವಿಧಾನ ಪೀಠಿಕೆ ಬೋಧಿಸಿದರು. ಇದೇ ಸಂದರ್ಭದಲ್ಲಿ ಪ್ರಬಂಧ, ಭಾಷಣ ಹಾಗೂ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಭಾಷಣ ಸ್ಪರ್ಧೆಯ ವಿಜೇತರಾದ ಕಾವೇರಿ ಭಜಂತ್ರಿ ಅವರು ಪ್ರಜಾಪ್ರಭುತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Related Articles

Back to top button