
ಪ್ರಗತಿವಾಹಿನಿ ಸುದ್ದಿ: ಕಳೆದ ಆಗಸ್ಟ್ 27ರಂದು ಮೂರನೆ ಮಹಡಿಯಿಂದ ಬಾಲಕಿ ಬಿದ್ದು ಸಾವನ್ನಪ್ಪಿದ್ದಳು, ಆದರೆ ಬಾಲಕಿ ಪಾಲಿಗೆ ಮಲ ತಾಯಿಯೇ ಯಮ ಆಗಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕಿಯನ್ನು ಶಾನವಿ ಎಂದು ಗುರುತಿಸಲಾಗಿದೆ. ಬೀದರ್ ನ ಆದರ್ಶ ಕಾಲೋನಿಯಲ್ಲಿ ಆಗಸ್ಟ್ 27ರಂದು ಬಾಲಕಿ ಸಾವನ್ನಪ್ಪಿದಳು. ಪಕ್ಕದ ಮನೆಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಮಲತಾಯಿ ರಾಧಾ ಎನ್ನುವಳು ಬಾಲಕಿಯನ್ನು ಮೂರನೆ ಮಹಡಿಯಿಂದ ತಳ್ಳಿರುವುದು ಬೆಳಕಿಗೆ ಬಂದಿದೆ. ಶಾನವಿ ತಮ್ಮ ಕುಟುಂಬಕ್ಕೆ ಹೊರೆಯಾಗ್ತಾಳೆ ಅನ್ನೋಕಾರಣಕ್ಕೆ ರಾಧಾ ಈ ರೀತಿ ಮಾಡಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಮೃತ ಶಾನವಿ ತಾಯಿ ಖಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಳು. ಇದಾದ ಬಳಿಕ ಮೃತ ಶಾನವಿ ತಂದೆ ಸಿದ್ಧಾಂತ, 2023ರಲ್ಲಿ ರಾಧಾ ಜೊತೆ 2ನೇ ವಿವಾಹವಾಗಿದ್ದರು. ಸಿದ್ಧಾಂತ ಹಾಗೂ ರಾಧಾಗೆ ಎರಡು ಅವಳಿ ಮಕ್ಕಳು ಹುಟ್ಟಿದರು. ಇದಾದ ಬಳಿಕ ಶಾನವಿ ಮೇಲೆ ರಾಧಾಳಿಗೆ ತಾತ್ಸಾರ ಶುರುವಾಗಿತ್ತು. ಭವಿಷ್ಯದಲ್ಲಿ ಈಕೆ ತನಗೆ ಹೊರೆಯಗಬಹುದು ಅನ್ನೋ ಕಾರಣಕ್ಕೆ ರಾಧಾ ಈ ತಈ ರೀತಿ ಮಾಡಿದ್ದಾಳೆ.
ಮೃತ ಬಾಲಕಿ ಅಜ್ಜಿ ರಾಧಾ ವಿರುದ್ಧ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.