Kannada NewsKarnataka NewsPolitics

*ಮಾಜಿ ಸಚಿವ ಹರತಾಳು ಹಾಲಪ್ಪಗೆ ಮಾತೃ ವಿಯೋಗ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ ಹರತಾಳು ಹಾಲಪ್ಪ ಅವರ ತಾಯಿ ಮಂಜಮ್ಮ (94) ನಿಧನ ಹೊಂದಿದ್ದಾರೆ.‌

ಬೆಂಗಳೂರಿನ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ನಾಳೆ ಬೆಳಗ್ಗೆ 8:00 ವರೆಗೆ  ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.‌ ನಾಳೆ ಸೊರಬ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.‌

ಮಂಜಮ್ಮ ಗೆ ಹರತಾಳು ಹಾಲಪ್ಪ ಸೇರಿದಂತೆ 12 ಮಕ್ಕಳು.‌ 9 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳನ್ನು ಹೊಂದಿದ್ದರು.‌ ಅವರ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.‌  

Home add -Advt

Related Articles

Back to top button