
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಗರ್ಭಿಣಿ ಮಹಿಳೆಯರಿಗೆ ಸಮತೋಲನ ಆಹಾರ ಅವಶ್ಯಕತೆ ಹಾಗೂ ಆರೋಗ್ಯದ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಅಸುಂಡಿ ಗ್ರಾಮದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳೆಗಾವಿ, ಶಿಶು ಅಭಿವೃದ್ದಿ ಯೋಜನಾ ಕಚೇರಿ ಸವದತ್ತಿ, ವತಿಯಿಂದ ಈ ಅಭಿಯಾನದಲ್ಲಿ ಗ್ರಾಮದ 30 ಕ್ಕೂ ಹೆಚ್ಚು ತಾಯಿ-ಮಕ್ಕಳು ಹಾಗೂ ಗರ್ಭಿಣಿಯರು ಉತ್ಸಾಹದಿಂದ ಭಾಗಿಯಾಗಿದ್ರು. ನಗರದ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ 5 ಜನ ಗರ್ಭಿಣಿ ಸ್ತ್ರೀಯರಿಗೆ ಇಲಾಖೆ ವತಿಯಿಂದ ತವರು ಮನೆಯವರಂತೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಈ ವೇಳೆ ತಿಂಗಳು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಕ್ಕಳಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಎಸಿಡಿಪಿಓ ಗೀತಾ ಬಂಗೇರ್ ಗರ್ಭಿಯಾದ ಮಹಿಳೆಯರ ಆರೋಗ್ಯ ಹಾಗೂ ದಿನಚರಿ ಹೇಗಿರಬೇಕು, ಆರೋಗ್ಯ ಕಾಪಾಡಿಕೊಳ್ಳುವ ವಿಧಾನ, ನಿಯಮಿತ ಆರೋಗ್ಯ ತಪಾಸಣೆ, ಮಕ್ಕಳ ಸುರಕ್ಷತೆ ಕುರಿತು ಮಾಹಿತಿ ನೀಡಿದ್ರು.
ಕಾರ್ಯಕ್ರಮದಲ್ಲಿ ಎಸಿಡಿಪಿಓ ಗೀತಾ ಬಂಗೇರ, ಮೇಲ್ವಿಚಾರಕಿ ಮಾಧುರಿ ಬಡಿಗೇರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ವಿಜಯ ನರಗುಂದ, ಗ್ರಾ.ಪಂ ಪಿಡಿಓ ಪ್ರಶಾಂತ ತೋಟಗಿ, ಗ್ರಾಪಂ ಅಧ್ಯಕ್ಷರಾದ ಈರಪ್ಪ ತೋಟಗಿ, ಸದಸ್ಯರಾದ ಲಿಂಗರಾಜ ಕಾಲವಾಡ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ಹಿರಿಯರು ಇದ್ದರು.