
ಪ್ರಗತಿವಾಹಿನಿ ಸುದ್ದಿ: ನಟ, ರಾಜಕಾರಣಿ ವಿಜಯ್ ದಳಪತಿ ರ್ಯಾಲಿಯಲ್ಲಿ ಉಂಟಾದ ಕಾಲ್ತುಳಿತಕ್ಕೆ 16 ಮಹಿಳೆಯರು ಮತ್ತು ಎಂಟು ಮಕ್ಕಳು ಸೇರಿದಂತೆ ಕನಿಷ್ಠ 38 ಜನರು ಸಾವನ್ನಪ್ಪಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ಚುನಾವಣಾ ಸಮಾವೇಶದಲ್ಲಿ ಭೀಕರ ಕಾಲ್ತುಳಿ ಸಂಭವಿಸಿದ್ದು, 38 ಜನ ಸಾಚನ್ನಪ್ಪಿದ್ದಾರೆ. ಇನ್ನು ಹಲವರು ಸಾವನ್ನಪ್ಪುವ ಸಾಧ್ಯತೆ ಇದ. ಈಗಾಗಲೆ ಕರೂರ್ ಮತ್ತು ತಿರುಚ್ಚಿಯಾದ್ಯಂತ 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕನಿಷ್ಠ ಹತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳನ್ನು ಹೊರತುಪಡಿಸಿ ಬಹುತೇಕ ಮೃತರು ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ ಬೆಂಬಲಿಗರಾಗಿದ್ದರು.
ರ್ಯಾಲಿಗಾಗಿ ಕನಿಷ್ಠ ಆರು ಗಂಟೆಗಳ ಕಾಲ ಕಾದಿದ್ದರು. ಸ್ಥಳಕ್ಕೆ ರ್ಯಾಲಿ ತಡವಾಗಿ ಬಂದಿತು. ಹೀಗಾಗಿ, ಹೆಚ್ಚಿನ ಜನಸಂದಣಿ ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ರ್ಯಾಲಿಯ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನಸಮೂಹದ ಒಂದು ಭಾಗ ಮುಂದಕ್ಕೆ ಬಂದ ನಂತರ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು. ಮಕ್ಕಳು ಸೇರಿದಂತೆ ಹಲವರಿದ್ದವರು. ಈ ವೇಳೆ ಕಾಲ್ತುಳಿತ ಸಂಭವಿಸುತ್ತಿದ್ದಂತೆ ಜನದಟ್ಟಣೆಯಲ್ಲಿ ಹಲವರು ಮೂರ್ಛ ಹೋದರು. ಈ ವೇಳೆ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಒಂಬತ್ತು ವರ್ಷದ ಬಾಲಕಿ ಕಾಣೆಯಾಗಿದ್ದಾಳೆಂದು ವರದಿಯಾಗಿದೆ.
ತಡವಾಗಿ ಆಗಮಿಸಿದ ವಿಜಯ್ ದಳಪತಿ ಅವರನ್ನು ನೋಡಲು, ಅವರ ಮಾತು ಕೇಳಲು ಹಲವರು ಮರ ಹತ್ತಿದ್ದರು. ವಿಜಯ್ ದಳಪತಿ ಮಾತನಾಡಲಾರಂಭಿಸಿದ ಕೆಲವೇ ಸಮಯದಲ್ಲಿ ವಿಜಯ್ ಅವರಿದ್ದ ವ್ಯಾನ್ ಹಿಂಭಾಗದಲ್ಲಿ ಮರದ ಕೊಂಬೆಗಳು ಮುರಿದುಬಿದ್ದವು. ಇದರಿಂದ ನೂಕುನುಗ್ಗಲು ಉಂಟಾಯಿತು ಎನ್ನಲಾಗಿದೆ.