
ಪ್ರಗತಿವಾಹಿನಿ ಸುದ್ದಿ: ಪೌಡರ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ರಾಜು ಪಾಸ್ವಾನ್ (23) ಮೃತ ಯುವಕ. ಬಿಹಾರ ಮೂಲದ ರಾಜು ಸಂತೋಷ್ ಎಂಬುವವರಿಗೆ ಸೇರಿದ್ದ ಕಂಪನಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ಇಂದು ಮಧ್ಯಾಹ್ನ ಪೌಡರ್ ಮಿಕ್ಸಿಂಗ್ ಮಾಡುವಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.