Film & EntertainmentKannada NewsLatest

*ಇಂತಹ ನೋವಿನ ಸ್ಥಿತಿ ಎಂದೂ ನೋಡಿರಲಿಲ್ಲ: ಕಾಲ್ತುಳಿತ ದುರಂತಕ್ಕೆ ನಟ ವಿಜಯ್ ಮೊದಲ ಪ್ರತಿಕ್ರಿಯೆ*

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ತಮಿಳಿಗ ವೆಟ್ರಿ ಪಕ್ಷದ ಸಂಸ್ಥಾಪಕ, ನಟ ವಿಜಯ್ ಅವರ ರಾಜಕೀಯ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು. ನೂರಾರು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈದುರಂತದ ಬಗ್ಗೆ ನಟ ವಿಜಯ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಹೇಳಿಕೆ ಬಿಡಿಗಡೆ ಮಾಡಿರುವ ನಟ ವಿಜಯ್, ನನ್ನ ಜೀವನದಲ್ಲಿ ಇಂತಹ ನೋವಿನ ಸ್ಥಿತಿ ನೋಡಿರಲಿಲ್ಲ. ಕಾಲ್ತುಳಿತ ಘಟನೆ ಆಗಬಾಅರದಿತ್ತು. ಮನಸ್ಸಿಗೆ ತುಂಬಾ ನೋವಾಗಿದೆ. ನನ್ನನ್ನು ನೋಡಿ ಅಭಿಮಾನಿಗಳು ರ್ಯಾಲಿಗೆ ಬಂದಿದ್ದರು. ನನ್ನನ್ನು ಟಾರ್ಗೆಟ್ ಮಾಡಿ ಆದರೆ ಜನರನ್ನು ಟಾರ್ಗೆಟ್ ಮಾಡಬೇಡಿ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಘಟನೆ ಯಾಕೆ ಸಂಭಸಿತು? ಹೇಗೆ ಆಯುತು? ಎಲ್ಲವೂ ಶೀಘ್ರದಲ್ಲಿಯೇ ಗೊತ್ತಾಗಲಿದೆ. ಸತ್ಯ ಹೊರಬರಲಿದೆ ಎಂದು ಹೇಳಿದರು. ಶೀಘ್ರದಲ್ಲಿ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇನೆ.

ಪ್ರಕರಣದಲ್ಲಿ ನನ್ನ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳೇ ನಾನು ನಿಮ್ಮಲ್ಲಿ ಒಂದು ವಿನಂತಿ ಮಾಡುತ್ತೇನೆ. ನೀವು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಹುದು. ಆದರೆ ಕಾರ್ಯಕರ್ತರ ಮೇಲೆ ಅಲ್ಲ. ನನ್ನ ಟಿವಿಕೆ ಕಚೇರಿಗೆ ಬಂದು ಕ್ರಮ ಕೈಗೊಳ್ಳಿ. ಆದರೆ ಕಾರ್ಯಕರ್ತರು, ಜನರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದಿದ್ದಾರೆ.

Home add -Advt


Related Articles

Back to top button