*ಮಹಿಳೆಯರು ನಮ್ಮ ಸಂಸ್ಕೃತಿಯ ರಾಯಬಾರಿಗಳು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ವೈಶಿಷ್ಟ್ಯಪೂರ್ಣವಾಗಿ ಹಬ್ಬಗಳ ಆಚರಣೆಯ ಮೂಲಕ ನಮ್ಮ ಮಹಿಳೆಯರು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ. ಹಾಗಾಗೆಯೇ ಮಹಿಳೆಯರು ಸಂಸ್ಕೃತಿಯ ರಾಯಬಾರಿಗಳು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ನವರಾತ್ರಿಯ ಅಂಗವಾಗಿ ಸುಳೇಭಾವಿ ಗ್ರಾಮದ ಶ್ರೀ ಶಾಕಾಂಭರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಪಾರಾಯಣ ಮತ್ತು ದೇವಿಯ ವಿಶೇಷತೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲ ಸಂಪರ್ದಾಯಗಳನ್ನು ಪಾಲಿಸಿ ಪ್ರತಿಯೊಂದು ಹಬ್ಬಗಳನ್ನು ಆಚರಿಸುವವರು ನಮ್ಮ ಮಹಿಳೆಯರು. ಹಾಗಾಗಿ ಮಹಿಳೆಯರಿಂದಾಗಿಯೇ ಸಂಸ್ಕೃತಿ ಉಳಿದು ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಸುಳೇಬಾವಿಯ ಮಹಾಲಕ್ಷ್ಮೀಯ ಆಶಿರ್ವಾದದಿಂದಾಗಿ ನಾನು ರಾಜ್ಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಹಾಗಾಗಿ ಸುಳೇಬಾವಿಗೆ ಬಂದು ದೇವಿಯ ಆಶಿರ್ವಾದ ಪಡೆಯುವ ಅವಕಾಶವನ್ನು ಯಾವತ್ತೂ ಬಿಟ್ಟುಕೊಳ್ಳುವುದಿಲ್ಲ ಎಂದು ಸಚಿವರು ಹೇಳಿದರು.
ಈ ವೇಳೆ ಪ್ರವಚನ ಶ್ರೀ ಬಾಬುರಾವ್ ಮಹಾರಾಜರು, ದತ್ತಾ ಬಂಡಿಗಣಿ, ಶಂಕರಗೌಡ ಪಾಟೀಲ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.