Karnataka NewsLatestPolitics
*ಮೈಸೂರು ದಸರಾ ಸಂಭ್ರಮ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಗೆ ನೀಡಲು ಸಿದ್ಧವಾಗಿದೆ ವಿಶೇಷ ಗಿಫ್ಟ್*

ಪ್ರಗತಿವಾಹಿನಿ ಸುದ್ದಿ: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಚಾಲನೆ ನೀಡಲಿದ್ದಾರೆ. ಜಂಬೂಸವಾರಿಗೆ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೊಡಲು ವಿಶೇಷ ಉಡುಗೊರೆ ಸಿದ್ದವಾಗಿದೆ.
ಮೈಸೂರು ಕಲಾವಿದ ರಾಜೇಶ್ ಎಂಬುವವರು ತಯಾರಿಸಿರುವ ಪಂಚಲೋಹದ ಸಿದ್ದರಾಮೇಶ್ವರ ಮೂರ್ತಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅವರ ಮನೆದೇವರಾದ ಕೆಂಕೇರಮ್ಮ ಮೂರ್ತಿಯನ್ನು ನೀಡಲುತ್ತಿದೆ.
ಪ್ರತಿ ವರ್ಷವೂ ಜಂಬೂಸವಾರಿಗೆ ಚಾಲನೆ ನೀಡುವವರಿಗೆ ರಾಜೇಶ್ ತಮ್ಮ ಕೈಯ್ಯಾರೆ ತಯಾರಿಸುವ ಮೂರ್ತಿಗಳನ್ನು ಗಣ್ಯರಿಗೆ ಕೊಡುಗೆಯಾಗಿ ನೀಡುತ್ತಾರೆ ಎಂದು ವಿಶೇಷ.