Belagavi NewsBelgaum NewsKannada NewsKarnataka NewsLatest
*ವಾಕಿಂಗ್ ಗೆ ತರಳಿದ್ದವರ ಮೇಲೆ ಹರಿದು ಹೋದ ಕಾರು: ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ವೇಗವಾಗಿ ಬಂದ ಕಾರು ವಾಯುವಿಹಾರಕ್ಕೆ ತೆರಳಿದ್ದ ಇಬ್ಬರ ಮೇಲೆ ಹರಿದು ಹೋಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.
ಖಾನಾಪುರದ ಕುಂಬಾರ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೋವಾ ಮೂಲದ ಇರ್ಫಾನ್ ಅಬ್ದುಲ್ ಸತ್ತಾರ್ ಎಂಬಾತ ತನ್ನ ಓಮಿನಿ ಕಾರಿನಲ್ಲಿ ವೇಗವಾಗಿ ಬಂದಿದ್ದು, ವಾಕಿಂಗ್ ಹೋಗುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿಹೊಡೆದಿದ್ದು, ಕೆಳಗೆ ಬಿದ್ದ ಇಬ್ಬರ ಮೇಲೆ ಹರಿದು ಹೋಗಿದೆ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ಸೀಮಾ ಹಳನಕರ (27) ಹಾಗೂ ರವಳು ಭರಮಾನಿ ಚೌಧರಿ (67) ಎಂದು ಗುರುತಿಸಲಾಗಿದೆ. ಸೀಮಾ ಪತಿ ಅಮರ ಹಳನಕರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.