*ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟಿವ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು, ರಾಷ್ಟ್ರ, ರಾಜ್ಯದ ಬಿಜೆಪಿ ನಾಯಕರು ಜಿಲ್ಲೆಗೆ ಆಗಮಿಸಿದರು ಅಂತರ ಕಾಯ್ದುಕೊಳ್ಳುತಿದ್ದರು. ಆದರೆ ಇದೆ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಬಿಜೆಪಿ ನಾಯಕರಿಗೆ ರಮೇಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.
ಬೆಳೆ ಹಾನಿ ವಿಕ್ಷಣೆಗೆ ಬೆಳಗಾವಿಗೆ ಆಗಮಿಸಿರುವ ರಾಜ್ಯ ಬಿಜೆಪಿ ನಾಯಕರ ಜೊತೆಗೆ ರಮೇಶ್ ಜಾರಕಿಹೊಳಿ ಸಾಥ್ ನೀಡಿದರು. ರೈತರ ಜಮೀನಿನ ಪರಿಸ್ಥಿತಿ ಅವಲೋಕಿಸದರು. ರೈತರ ಮನೆ ಬಳಿ ಬಂದು ಜಮೀನಿಗೆ ಬರದೇ ರಮೇಶ್ ಜಾರಕಿಹೊಳಿ ತೆರಳಿದ್ದಾರೆ
ಬೆಳಗಾವಿ ಜಿಲ್ಲೆಯಾದ್ಯಂತ ಸುರಿದಿರುವ ಭಾರಿ ಮಳೆಯಿಂದ ಎಲ್ಲಡೆ ರೈತರು ಬೆಳೆದಿರುವ ಬೆಳೆ ಹಾನಿಯಾಗಿದೆ. ಹಾಗಾಗಿ ಇಂದು ಬಿಜೆಪಿ ನಾಯಕರಿಂದ ಅತಿವೃಷ್ಟಿ ಪ್ರದೇಶ ವೀಕ್ಷಿಸಲಾಗಿದೆ.
ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್ಸಿಗಳಾದ ಸಿಟಿ ರವಿ, ಎನ್ ರವಿಕುಮಾರ್, ಸಂಸದ ರಮೇಶ್ ಜಿಗಜಿಣಗಿ ನೇತೃತ್ವದ ತಂಡದಿಂದ ಪರಿಶೀಲನೆ ನಡೆಲಾಗಿದ್ದು, ಜಿಲ್ಲೆಯ ನಾಯಕರಾದ ಸಂಸದ ಈರಣ್ಣ ಕಡಾಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಈರಣ್ಣಗೌಡ ಮೀಸಿಪಾಟೀಲ್ ಎಂಬುವವರ ಜಮೀನಿಗೆ ಆಗಮಿಸಿದ ನಿಯೋಗ, ಗಜ್ಜರಿ ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು.