Belagavi NewsBelgaum NewsKannada NewsKarnataka NewsLatest

*ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ನ ಸೇತುವೆ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ದುರ್ಗಾ ನಗರದ ಅಶ್ವಿನಿ ಬಾಬುರಾವ್ ಪಾಟೀಲ್ ಮೃತ ಮಹಿಳೆ. ಅಂಗನವಾಡಿ ಕಾರ್ಯಕರ್ತೆ ಎಂದು ತಿಳಿದುಬಂದಿದೆ. ಅಕ್ಟೋಬರ್ ೨ರಂದು ಅಶ್ವಿನಿ ಕಕ್ಕೇರಿ ಜಾತ್ರೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಜಾತ್ರೆಯಿಂದ ವಾಪಾಸ್ ಆಗಿದ್ದ ಅಶ್ವಿನಿ ಬೀಡಿ ಗ್ರಾಮದಲ್ಲಿ ಇಳಿದಿದ್ದರು. ಆದರೆ ಮನೆಗೂ ಬಂದಿತ್ತ, ಅತ್ತ ತಾಯಿ ಮನೆಗೂ ಹೋಗಿಲ್ಲ.

ಈ ಹಿನ್ನೆಲೆಯಲ್ಲಿ ಅಶ್ವಿನಿ ಮಗ ಪೊಲೀಸರುಗೆ ದೂರು ನೀಡಿದ್ದರು. ವಾಹನವೊಂದರ ಚಾಲಕ ತಿನೈಘಾಟ್ ನ ಸೇತುವೆ ಕೆಳಗೆ ಮಹಿಳೆಯೊಬ್ಬರ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತದೇಹದ ಪಕ್ಕದಲ್ಲಿದ್ದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

Home add -Advt

ಅಶ್ವಿನಿ ಅವರದ್ದು ಕೊಲೆಯೋ? ಆತ್ಮಹತ್ಯೆಯೋ? ಆಕಸ್ಮಿಕ ಅಪಘಾತವೋ? ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

Related Articles

Back to top button